Skip to main content
ವಿಡಿಯೋ
general

ಜನವರಿ 19 ರೊಳಗೆ ಮತದಾರರ ಕರಡು ಪಟ್ಟಿ ಸಿದ್ದ - ಪಾಲಿಕೆ ಚುನಾವಣೆಗೆ ಹೆಚ್ಚಿದ ನಿರೀಕ್ಷೆ!?

By Shravanthi R
ಜನವರಿ 19 ರೊಳಗೆ ಮತದಾರರ ಕರಡು ಪಟ್ಟಿ ಸಿದ್ದ - ಪಾಲಿಕೆ ಚುನಾವಣೆಗೆ ಹೆಚ್ಚಿದ ನಿರೀಕ್ಷೆ!?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಮುಹೂರ್ತ ನಿಗದಿ ಪಡಿಸಲು ಸರ್ಕಾರವು ಮುಂದೆಜ್ಜೆ ಇಟ್ಟಿದೆ. ಸುಪ್ರೀಂಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ಜನವರಿ 19 ರೊಳಗೆ, ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ತಿಳಿಸಿರುವ ವರದಿ ಪ್ರಕಾರ, 369 ವಾರ್ಡ್‌ಗಳ ಪ್ರತ್ಯೇಕ ಮತದಾರರ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗಿದೆ. ಎಸ್‌ಇಸಿಯ ಪರಿಷ್ಕೃತ ವೇಳಾಪಟ್ಟಿಯ ಅಂದಾಜಿನಲ್ಲಿ, ಬೆಂಗಳೂರು ನಗರದ ಐದು ಪಾಲಿಕೆಗಳ ಚುನಾವಣೆಗೆ ಅರ್ಹತೆ ಪಡೆದ ಮತದಾರರ ಪರಿಷ್ಕೃತ ಪಟ್ಟಿ ಪ್ರಕ್ರಿಯೆಯನ್ನು ಈ ತಿಂಗಳ 19 ರೊಳಗೆ ಪೂರ್ಣಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. REDMI Note 15 5G (Glacier Blue, 8GB RAM 128GB Storage) | 108MP OIS Camera | Snapdragon 6 Gen 3 | 17.2cm Tough Curved AMOLED Screen | Segment’s Slimmest Phone | 5520mAh Si/C Battery | 45W Fast Charging

ಮಾಹಿತಿ ತಿಳಿಸಿರುವಂತೆ, ಹೊಸ ವಾರ್ಡ್‌ ಡಿಲಿಮಿಟೇಶನ್‌ ಆಧಾರದ ಮೇಲೆ ಮತದಾರರ ಪರಿಷ್ಕರಣಾ ಪಟ್ಟಿಯನ್ನು ಹೊಂದಿಸುವುದು ಆಡಳಿತ ಮಂಡಳಿಗೆ ಸವಾಲಿನ ಕೆಲಸವಾಗಿದೆ. ಈ ಬಗ್ಗೆ ಬಿಎಲ್‌ಒ - (ಬೂತ್‌ ಮಟ್ಟದ ಅಧಿಕಾರಿಗಳು ) ನಡೆಸುತ್ತಿರುವ ಪರಿಶೀಲನಾ ಕ್ರಮವೂ ಪ್ರಭಾವ ಬೀಳಲಿದ್ದು, ಚುನಾವಣೆಗೆ ಬೇಕಾದ ಕರಡು ಮತದಾರರ ಪಟ್ಟಿಗಾಗಿ ಎದುರು ನೋಡಲಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಅಬುದಾಬಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ - ಸುಸ್ಥಿರ ಇಂಧನ - ಭವಿಷ್ಯಕ್ಕಾಗಿ ಜಾಗತಿಕ ಸಹಕಾರ ಅಗತ್ಯ