ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನ ಸಭೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ವಿತರಣೆ ಹಾಗೂ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ವೆಂಕಟೇಶ್ ಜೋಶಿ ಪಾಲ್ಗೊಂಡಿದ್ದಾರೆ. ಭಾನುವಾರ ಈ ಬಗ್ಗೆ ತಿಳಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ, ಭಾರತವು ವಿವಿಧ ಕ್ಷೇತ್ರಗಳಲ್ಲಿನ ಕ್ರಾಂತಿಕಾರಿ ಬೆಳವಣಿಗೆಗಳ ಹಾಗೂ ಸುಧಾರಣೆಗಳ ವಿಷಯವಾಗಿ ಗಮನ ಸೆಳೆದಿದೆ.
2026 ರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ಸಚಿವರು ತೆರಳಿದ್ದಾರೆ. ಅವರನ್ನು ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ರಾಯಭಾರಿ ಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಹೊಸ ವರ್ಷದ ಹೊಸ್ತಿಲಲ್ಲಿ, ಈ ಮೂಲಕ ಭಾರತದ ಆಡಳಿತ ಸುಧಾರಣೆಗಳು ಹಾಗೂ ಕಾರ್ಯವೈಖರಿಯ ಫಲವಾಗಿ, ಮತ್ತಷ್ಟು ಹೆಚ್ಚಿನ ಹೂಡಿಕೆ ಆಕರ್ಷಿತ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ, ಅವರು, ಮಹಾರಾಷ್ಟ್ರದಲ್ಲಿ ʻಮಹಾʼ ಗೆಲುವು ಪಡೆದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಟ್ಟಿಗೆ ಕಾಣಿಸಿಕೊಂಡಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. Canon EOS R50 V Mirrorless Camera Kit with RF-S14-30mm F4-6.3 is STM PZ Lens – Black | 24.2 MP APS-C Sensor, 4K Video, Compact Design
ಮತ್ತೊಂದೆಡೆ, ಅದೇ ದಿನದಂದು,(ಜ.18 ಭಾನುವಾರ) ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ, ರಾಜ್ಯ ಉನ್ನತ ಮಟ್ಟದ ನಿಯೋಗವು ವಿವಿಧ ಆರ್ಥಿಕ ಅಭಿವೃದ್ದಿ ಮಂಡಳಿಗಳೊಟ್ಟಿಗೆ ಮಾತುಕತೆ ನಡೆಸಲಿದೆ ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ:ಕರ್ನಾಟಕ ಸ್ಥಳೀಯ ಚುನಾವಣೆ: ಏಕಕಾಲಕ್ಕೆ ನಡೆಯಲಿರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ!?