ಬಹುಕಾಲದ ನಂತರ ನಡೆಯುತ್ತಿರುವ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗೆ ರಾಜ್ಯ ಸರ್ಕಾರದಿಂದ ಅಡಿಪಾಯ ಹಾಕಲಾಗಿದೆ ಎನ್ನಲಾಗಿದೆ. ಇದರ ಮೊದಲ ಹಂತವಾಗಿ, ರಾಜ್ಯ ಚುನಾವಣಾ ಆಯೋಗವು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ 88.91 ಲಕ್ಷ ಮತದಾರರ ಕರಡುಪಟ್ಟಿಯನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ. ನಗರದ 369 ವಾರ್ಡ್‌ಗಳ 8,045 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಒಟ್ಟು 88.91 ಲಕ್ಷ ಮತದಾರರಲ್ಲಿ, ಸರಿಸುಮಾರು, 45.8 ಲಕ್ಷ ಪುರುಷರಿದ್ದು, ಮಹಿಳಾ ಮತದಾರರು 43.1 ಲಕ್ಷ ಇದ್ದು, ಇತರರು 1,200ಕ್ಕೂ ಹೆಚ್ಚು ಎಂದು ತಿಳಿಸಲಾಗಿದೆ. ಗರಿಷ್ಠ ಮತದಾರರು ದಕ್ಷಿಣ