ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ಇದೀಗ ಸಿನಿಮಾರಂಗಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣವೇ ಗಿಲ್ಲಿ ನಟನೆಯ ಹೊಸ ಸಿನಿಮಾ ಬಗ್ಗೆ ಸುದ್ದಿಗಳು ಹರಿದಾಡಲು ಆರಂಭವಾಗಿವೆ. ಮಂಡ್ಯ ಹಳ್ಳಿಯ ಹಿನ್ನೆಲೆಯಲ್ಲಿರುವ ಕಾಮಿಡಿ ಪ್ರೇಮ ಕಥೆ ಇದಾಗಿದ್ದು, ಈ ಚಿತ್ರವನ್ನು ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.Arayna Women's Cotton Printed Floral Straight Kurta with Palazzo Pants and Dupatta
ಈ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜೋಗಿ ಪ್ರೇಮ್, ಈ ವಿಚಾರ ಇನ್ನೂ ಪ್ರಾರಂಭಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಗಿಲ್ಲಿಯ ಪ್ರತಿಭೆ ಮತ್ತು ಹಾಸ್ಯ ಶೈಲಿ ನನಗೆ ಇಷ್ಟವಾಗಿದೆ. ಆದರೆ ಸಿನಿಮಾ ಬಗ್ಗೆ ಅಧಿಕೃತವಾಗಿ ಹೇಳುವ ಸಮಯ ಇನ್ನೂ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಕ್ಷಿತಾ ಪ್ರೇಮ್ ಈ ಚಿತ್ರವನ್ನು ನಿರ್ಮಿಸುತ್ತಾರೆ ಎಂಬ ವಿಚಾರಕ್ಕೂ ಅಧಿಕೃತ ದೃಢೀಕರಣ ಇಲ್ಲ ಎಂದಿದ್ದಾರೆ.ಬಿಗ್ ಬಾಸ್ ಗೆಲುವಿನ ನಂತರ ದರ್ಶನ್ ಮತ್ತು ಶಿವಣ್ಣರನ್ನು ನೆನಪು ಮಾಡಿಕೊಂಡ ಗಿಲ್ಲಿ – ಏನಿದು ಕಾರಣ?
ಗಿಲ್ಲಿ ಈಗಾಗಲೇ ‘ಡೆವಿಲ್’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸಿದ್ದಾರೆ. ಜೊತೆಗೆ ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಹಲವು ಟಿವಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಗೆಲುವಿನ ನಂತರ ಗಿಲ್ಲಿಯ ಸಿನಿ ಪಯಣ ಹೇಗೆ ಸಾಗಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.