Skip to main content
ವಿಡಿಯೋ
webstory

ಡಿಜಿಟಲ್‌ ವರ್ಡ್‌ನಲ್ಲಿ ʻಸೈಬರ್‌ ಕ್ರೈಮ್‌ - ತಡೆಗಟ್ಟುವುದು ಹೇಗೆ?ʼ - ಸಮಗ್ರ ಮಾಹಿತಿ ಕುರಿತ ಪುಸ್ತಕ

By Shravanthi R
ಡಿಜಿಟಲ್‌ ವರ್ಡ್‌ನಲ್ಲಿ ʻಸೈಬರ್‌ ಕ್ರೈಮ್‌ - ತಡೆಗಟ್ಟುವುದು ಹೇಗೆ?ʼ - ಸಮಗ್ರ ಮಾಹಿತಿ ಕುರಿತ ಪುಸ್ತಕ

ಸೈಬರ್‌ ಕರಾಳತೆಯನ್ನು ಪರಿಚಯಿಸುವ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಸುರಕ್ಷತಾ ದಾರಿಗಳನ್ನು ಹೊತ್ತು ತಂದಿರುವ ಪುಸ್ತಕ ಕೈಪಿಡಿ - ಸತೀಶ್‌ ವೆಂಕಟಸುಬ್ಬು ಅವರ ʻಸೈಬರ್‌ ಕ್ರೈಮ್‌ - ತಡೆಗಟ್ಟುವುದು ಹೇಗೆ?ʼ.

ಇವತ್ತಿನ ಇಂಟರ್‌ನೆಟ್‌ ಹಾಗೂ ಸ್ಮಾರ್ಟ್‌ ಡಿಜಿಟಲ್‌ ವರ್ಡ್‌ನಲ್ಲಿ, ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಮಾಡದಿರುವ ಜನರಿಲ್ಲ. ಜೊತೆ ಜೊತೆಗೆ, ಡಿಜಿಟಲ್‌ ಕ್ರಿಮಿನಲ್‌ ಪ್ರಕರಣಗಳ ಸಂಖ್ಯೆಯೂ  ಹೆಚ್ಚುತ್ತಿದೆ. ಸೈಬರ್‌ ಕರಾಳತೆಯನ್ನು ಪರಿಚಯಿಸುವ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಸುರಕ್ಷತಾ ದಾರಿಗಳನ್ನು ಹೊತ್ತು ತಂದಿರುವ ಪುಸ್ತಕ ಕೈಪಿಡಿ - ಸತೀಶ್‌ ವೆಂಕಟಸುಬ್ಬು ಅವರ ʻಸೈಬರ್‌ ಕ್ರೈಮ್‌ - ತಡೆಗಟ್ಟುವುದು ಹೇಗೆ?ʼ.

ತಂತ್ರಜ್ಞಾನ ಕ್ಷೇತ್ರದಲ್ಲಿ ಪದೇ ಪದೇ ಕೇಳಿಬರುತ್ತಿರುವ ಹೆಸರು, ಸೈಬರ್‌ ಕ್ರೈಂ. ಸೈಬರ್‌ ಅಪರಾಧಗಳ ಸುಳಿಗೆ ಸಿಲುಕಿಕೊಳ್ಳುವ ಮೊದಲು, ಎಚ್ಚೆತ್ತುಕೊಳ್ಳಬೇಕಿದೆ. ಟೆಕ್‌ ನಾಲೆಡ್ಜ್‌ ಜೊತೆಗೆ, ಅದರ ಪರಿಣಾಮಕಾರಿ ಬಳಕೆ ಬಗ್ಗೆ ವಿಶ್ಲೇಷಿಸಿರುವ ಪುಸ್ತಕವಿದಾಗಿದೆ ಎನ್ನಲಾಗಿದೆ. ಸೈಬರ್‌ ಜಾಗೃತಿಯ ಜೊತೆಗೆ ʻಸೈಬರ್‌ ಕಾನೂನುʼ ಕುರಿತು ತಿಳಿಸಿರುವ ಈ ಪುಸ್ತಕವು ವಿಷಯದ ಸುತ್ತಲೂ ಇರುವ ಅರಿವು ಮತ್ತು ಜಾಗೃತಿಯ ಮೂಲಕ ಮಾಹಿತಿಯ ಕೊರತೆಯನ್ನು ಕಡಿತಗೊಳಿಸಿದ್ದಾರೆ. Canon RF 24-105mm f/4-7.1 is STM Mirrorless Camera Lens, Black

ಪುಸ್ತಕದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ, ಇಂದಿನ ಕಾಲಮಾನಕ್ಕೆ ತಕ್ಕಂತೆ ಡಿಜಿಟಲ್‌ ಮಾಹಿತಿಯನ್ನು ಪ್ರಸ್ತುತವಾಗಿರಿಸಿದ್ದಾರೆ. ಮಾಹಿತಿಯು ಸರಳ ಶೈಲಿಯಲ್ಲಿದ್ದು, ಇದೊಂದು ಸುರಕ್ಷಿತ ಮಾರ್ಗದರ್ಶಿಯಾಗಲಿದೆ ಎಂದು ಪುಸ್ತಕದ ಕುರಿತಾಗಿ ವಿಮರ್ಶಕರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ - 88.91 ಲಕ್ಷ ಮತದಾರರ ಕರಡುಪಟ್ಟಿ ಬಿಡುಗಡೆ!?