ರಾಜ್ಯ ಸರ್ಕಾರವು ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ʼಮೂರು ಸ್ತರ: ಒಂದು ಗ್ರಾಮ - ಒಂದು ಚುನಾವಣೆʼ ಸೂತ್ರವನ್ನು ಪರಿಚಯಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ, ಸೋಮವಾರ(ಜ.19) ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜ್ಯದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಚಿಂತನೆ ಇದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಸಂವಿಧಾನ ಬದ್ದವಾಗಿ ನಮ್ಮ ಸರ್ಕಾರವು, ಚುನಾವಣೆ ನಡೆಸಲು ಸಿದ್ದ ಎಂದು ಹೇಳಿರುವ ಅವರು, ಗ್ರೇಟರ್ ಬೆಂಗಳೂರು ಚುನಾವಣೆ ಜೊತೆಗೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಂದೇ ಬಾರಿಗೆ ನಡೆಸಲು ಚಿಂತನೆ ಮಾಡಿದ್ದೇವೆ ಎಂದಿದ್ದಾರೆ. ಈ ಚುನಾವಣೆಗಳಿಗೆ ಇವಿಎಂ ಬದಲಾಗಿ, ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮತಪತ್ರ ಬಳಕೆ ಯಾವುದೇ ತಪ್ಪಿಲ್ಲ. ಚುನಾವಣೆ ಯಾವ ರೂಪದಲ್ಲಿ ನಡೆಸಲಾಗುವುದು ಎನ್ನುವುದಕ್ಕಿಂತಲೂ ಮತದಾನ ಪ್ರಮಾಣ ಹೆಚ್ಚು ಮುಖ್ಯವಾಗುತ್ತದೆ ಎಂದಿದ್ದಾರೆ. GoPro HERO12 Waterproof Action Camera with Front & Rear LCD Screens, 5.3K60 Ultra HD Video, HyperSmooth 6.0 + AutoBoost, Live Streaming with Enduro Battery (1-Yr International + 1-Yr India Warranty)
ಯುವಜನರಿಗೆ ಅಧಿಕಾರ ಸಿಗಬೇಕು. ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು. 5 ನಗರ ಪಾಲಿಕೆ ಜೊತೆಗೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವ ತೀರ್ಮಾನ ಸರ್ಕಾರ ಮಾಡಿದೆ. ಮೀಸಲಾತಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಮತ್ತು ಸಚಿವರು ತಿಳಿಸಿದ್ದಾರೆ. ಈ ಕುರಿತ ಚರ್ಚೆ ಮಾಡುತ್ತಿದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆಂದು ವರದಿಯಾಗಿದೆ. ಇದನ್ನೂ ಓದಿ: ಡಿಜಿಟಲ್ ವರ್ಡ್‌ನಲ್ಲಿ ʻಸೈಬರ್ ಕ್ರೈಮ್ - ತಡೆಗಟ್ಟುವುದು ಹೇಗೆ?ʼ - ಸಮಗ್ರ ಮಾಹಿತಿ ಕುರಿತ ಪುಸ್ತಕ