Skip to main content
ವಿಡಿಯೋ
webstory

ಮತದಾನ - ಬ್ಯಾಲೆಟ್‌ ಪೇಪರ್‌ - ಅಂದಿನಿಂದ ಇಂದಿನವರೆಗೆ

By Shravanthi R
ಮತದಾನ - ಬ್ಯಾಲೆಟ್‌ ಪೇಪರ್‌ - ಅಂದಿನಿಂದ ಇಂದಿನವರೆಗೆ

ಮತದಾನ ಪ್ರಕ್ರಿಯೆಯಲ್ಲಿ ʻಬ್ಯಾಲೆಟ್‌ ಪೇಪರ್‌ʼ ಬಳಕೆಯು ಹಳೆಯ ಹಾಗೂ ಇತಿಹಾಸಬದ್ದ ವಿಧಾನ ಎನಿಸಿಕೊಂಡಿದೆ. ಪ್ರಾಚೀನ ಕಾಲದಿಂದ ಭಾರತದ ಆಧುನಿಕ ರಾಜಕೀಯ ಉಗಮದವರೆಗೆ ಇದರ ಕುರಿತದಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಮತದಾನ ಪ್ರಕ್ರಿಯೆಯಲ್ಲಿ ʻಬ್ಯಾಲೆಟ್‌ ಪೇಪರ್‌ʼ ಬಳಕೆಯು ಹಳೆಯ ಹಾಗೂ ಇತಿಹಾಸಬದ್ದ ವಿಧಾನ ಎನಿಸಿಕೊಂಡಿದೆ. ಪ್ರಾಚೀನ ಕಾಲದಿಂದ ಭಾರತದ ಆಧುನಿಕ ರಾಜಕೀಯ ಉಗಮದವರೆಗೆ ಇದರ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ. 


ಅಂದಿನ ಕಾಲದಲ್ಲಿ ಬ್ಯಾಲೆಟ್‌ ಪೇಪರ್‌, ಚುನಾಯಿತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕೃತ ಮತಪತ್ರವಾಗಿತ್ತು. ಬ್ಯಾಲೆಟ್‌ ಎಂಬುದು ಮೂಲತಃ ಇಟಾಲಿಯನ್‌ ಪದ “ಬ್ಯಾಲೋಟಾ” ದಿಂದ ಬಂದಿದ್ದು, ಇದರರ್ಥ ಸಣ್ಣ ಚೆಂಡು ಎಂದಾಗಿದೆ. ಬಿಳಿ ಚೆಂಡು ಒಪ್ಪಿಗೆಯನ್ನು ಸೂಚಿಸಿದರೆ, ಕಪ್ಪು ಚೆಂಡು ವಿರೋಧವನ್ನು ಸೂಚಿಸಿತ್ತು ಎನ್ನಲಾಗಿದೆ. 

ಆ ಬಳಿಕ 19ನೇ ಶತಮಾನದಲ್ಲಿ, ಗುಪ್ತ ಮತದಾನ ಪದ್ದತಿ (Secret Ballot) ಸಂದರ್ಭದಲ್ಲಿ ಆರಂಭಗೊಂಡಾಗ 1856ರಲ್ಲಿ, ಮೊದಲು ಆಸ್ಟ್ರೇಲಿಯಾದಲ್ಲಿ ಜಾರಿಗೊಳಿಸಿದ್ದಕ್ಕೆ ಇದನ್ನು “ಆಸ್ಟ್ರೇಲಿಯನ್‌ ಬ್ಯಾಲೆಟ್‌ ಸಿಸ್ಟಮ್‌” ಎಂದೇ ಕರೆಯಲಾಗುತ್ತಿತ್ತು. ADOFYS 49 in 1 Action Camera Accessory Kit Bundle Compatible for GoPro Hero 12/11/10/9 / 8/7/6/5 SJCAM/Akaso/Apeman/Xiaomi Yi Action Camera

ಭಾರತದಲ್ಲಿ ಸ್ವಾತಂತ್ಯ್ರ ನಂತರ 1951-52 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಯಾಯಿತು. ಸುಮಾರು ಕಾಲಗಳ ಎಲ್ಲಾ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ಗಳು ಬಳಕೆಯಲ್ಲಿದ್ದವು. ಆನಂತರ, ಗುರುತು ಇರುವ ಮತಪತ್ರದಲ್ಲಿ ಸ್ವಸ್ತಿಕ್‌ ಚಿಹ್ನೆಯಿರುವ ರಬ್ಬರ್‌ ಸ್ಟಾಂಪ್‌ ಬಳಸಿ, ಮತ ಚಲಾಯಿಸುತ್ತಿದ್ದರು. 

ಇದಾದ ಬಳಿಕ 1980-90ರ ನಂತರ ಎಲೆಕ್ಟ್ರಾನಿಕ್‌ ಮತಯಂತ್ರಗಳ ಪ್ರಯೋಗ ಶುರುವಾಯಿತು. 2000ದ ನಂತರ ಎಲ್ಲಾ ಬಹುತೇಕ ಚುನಾವಣೆಗಳಲ್ಲಿ ಇವಿಎಂ ಮಷಿನ್‌ ಬಳಕೆಗೆ ಬಂದಿತು. ಇದೀಗ ಪ್ರಸ್ತುತ ವಿದ್ಯಮಾನದಲ್ಲಿ, ಕಾಲು ಶತಮಾನದ ಬಳಿಕ ಮತ್ತೆ ಮರಳಿ ಇವಿಎಂ ಬದಲಾಗಿ ಬ್ಯಾಲೆಟ್‌ ಪೇಪರ್‌ ನಿಂದ ಚುನಾವಣೆ ನಡೆಸುವ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದೆ. 

ಇನ್ನೂ, ಬ್ಯಾಲೆಟ್‌ ಪೇಪರ್‌ ಹಾಗೂ ಇವಿಎಂ ನ ಸಾಧಕ-ಬಾಧಕಗಳನ್ನು, ಇವಿಎಂನ ತಂತ್ರಜ್ಞಾನ ಸ್ದಬಳಕೆ ಸುರಕ್ಷಿತವೇ ಅಲ್ಲವೇ ಎನ್ನುವ ಬಗ್ಗೆ ವಿವಿಧ ಆಯಾಮಗಳಲ್ಲಿ ನೋಡಲಾಗುತ್ತಿದೆ; ಮತದಾನ ವಿಧಾನಗಳಲ್ಲಿನ ಪಾರದರ್ಶಕತೆ ಹಾಗೂ ಮತದಾನ ಪ್ರಮಾಣದ ಕುರಿತಾಗಿ ಹೆಚ್ಚು ಪರ-ವಿರೋಧಗಳು ಕೇಳಿಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ - ಏಕಕಾಲಕ್ಕೆ ನಡೆಸುವ ಚಿಂತನೆ ಇದೆ - ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌