ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಚುನಾವಣೆ ಸೇರಿದಂತೆ, ಎಲ್ಲಾ ಸ್ಥಳೀಯ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ - ಮತಪತ್ರ ಬಳಕೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಇದರ ಕುರಿತಾಗಿ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿದೆ.
ಇವಿಎಂ ಬದಲಿಗೆ ಮತಪತ್ರ ಬಳಕೆ ಇವತ್ತಿನ ಕಾಲಮಾನಕ್ಕೆ ಎಷ್ಟು ಸೂಕ್ತ? ಇದರಿಂದ ಕಾಲವ್ಯಯವಾಗಲಿದೆ ಎಂದು ಈ ಬಗ್ಗೆ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ ಇದರಿಂದ ಚುನಾವಣಾ ಪಾರದರ್ಶಕತೆ ಹೆಚ್ಚಾಗಲಿದೆ ಎಂದು ಹೇಳಿದೆ. ಜಾಗತಿಕ ಉದಾಹರಣೆಯಾಗಿ ಬ್ಯಾಲೆಟ್ ಪೇಪರ್ ಬಳಕೆಯಲ್ಲಿದೆ; ವೋಟ್ ಚೋರಿ ಪ್ರಕರಣದ ಹಿನ್ನಲೆಯಾಗಿ ಹೇಳುವುದಾದರೆ, ಬ್ಯಾಲೆಟ್ ಪೇಪರ್ ಸುರಕ್ಷಿತ ವಿಧಾನ ಎಂದಿದೆ.
ಈ ನಡುವೆ ಚುನಾವಣಾ ಆಯೋಗವು ಈ ನಿರ್ಧಾರವು ಯಾವುದೇ ರಾಜಕೀಯ ಒತ್ತಡಗಳಿಂದ ಬಂದಿಲ್ಲ. ಬದಲಿಗೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ, ತೆಗೆದುಕೊಳ್ಳಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಸುಪ್ರೀಂಕೋರ್ಟ್ ಕೂಡ ಇದಕ್ಕೆ ತಡೆನೀಡಿಲ್ಲ ಎಂದು ಹೇಳಿದೆ. ಈ ನಡುವಲ್ಲಿ, ಮುಂಬರುವ ದಿನಗಳಲ್ಲಿ “ಬ್ಯಾಲೆಟ್ ಕದನ” ಯಾವ ತಿರುವು ಪಡೆಯಲಿದೆ ಕಾದು ನೋಡಬೇಕಿದೆ. ADOFYS 24 in 1 Accessories Kit Action Camera Mount Kit Compatible with Hero GoPro Hero 9/10/11& 12 Action Camera
ಎಸ್‌ಐಆರ್ - ರಾಜಕೀಯ ಗುದ್ದು?
ಎಸ್‌ಐಆರ್ ಕುರಿತ ರಾಜಕೀಯ ಹೇಳಿಕೆಗಳು ಸುದ್ದಿಯಲ್ಲಿದ್ದು, “ಕಾಂಗ್ರೆಸ್ ಎಂದಿಗೂ ಇದನ್ನು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ ಬದಲಾಗಿ ಯಾವೊಬ್ಬ ಅರ್ಹ ಮತದಾರರನೂ ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮ ಕಾಳಜಿ” ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ(ಜ.19) ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತದಾನ - ಬ್ಯಾಲೆಟ್ ಪೇಪರ್ - ಅಂದಿನಿಂದ ಇಂದಿನವರೆಗೆ