ಭಾನುವಾರ(ಜ.19) ದಂದು World Economic Forum ನಡೆಯುತ್ತಿರುವ ಹಿನ್ನೆಲೆಯಾಗಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ಗೆ ತೆರಳಿದ್ದಾರೆ. ಈ ಮುಖೇನ ಅವರು, ಕರ್ನಾಟಕದಿಂದ ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಿದ ಕೇಂದ್ರ ಸಚಿವರ ಪೈಕಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ವಿತರಣೆ ಹಾಗೂ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ವೆಂಕಟೇಶ್ ಜೋಶಿ ಪಾಲ್ಗೊಳ್ಳುವ ಮೂಲಕ ಭಾರತದ ಜಾಗತಿಕ ಹೆಜ್ಜೆಗೆ ಸಾಕ್ಷಿಯಾಗಿದ್ದಾರೆ.
ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ನಿರಂತರ ಅಪ್ಡೇಟ್ ತಿಳಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ, ಭಾರತವು ನವೀಕರಿಸಬಹುದಾದ ಇಂಧನದಲ್ಲಿ ಅಭಿವೃದ್ದಿ ಹಾಗೂ ನಾಯಕತ್ವದ ಸಾಮರ್ಥ್ಯದಿಂದ ಗಮನ ಸೆಳೆದಿದೆ ಎಂದಿದ್ದಾರೆ. ಇವರೊಟ್ಟಿಗೆ ಭಾರತದಿಂದ ಪ್ರಬಲ ತಂಡವಾಗಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೂ ಜೊತೆಗೂಡಿದ್ದಾರೆ. SanDisk Extreme® 256GB microSDXC UHS-I, 190MB/s Read, 130MB/s Write Memory Card for 4K Video on Smartphones, Action Cams and Drones
2026 ರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಅವರು ಭಾಗಿಯಾಗಿದ್ದು, ಭಾರತದ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಈ ನಡುವೆ ಹಲವು ಮಹತ್ವದ ಸಭೆಗಳು ಹಾಗೂ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದು, ಇದರಿಂದ ಪ್ರಮುಖ ವಿಷಯವಾರು ಹೂಡಿಕೆ ಅವಕಾಶಗಳನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜಕೀಯ ವಾಕ್ಸಮರಕ್ಕೆ ತಿರುಗಿದ ಬ್ಯಾಲೆಟ್ ಪೇಪರ್ ಚುನಾವಣೆ!?