ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ 2026 ರ ವಾರ್ಷಿಕ ಸಭೆಯಲ್ಲಿ ಕೇಂದ್ರ ಆಹಾರ ವಿತರಣಾ, ಗ್ರಾಹಕರ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಭಾಗಿಯಾಗಿದ್ದಾರೆ. ಅವರ ಪಾಲ್ಗೊಳ್ಳುವಿಕೆಯು ಭಾರತದ ಹಸಿರು ಹಾಗೂ ಶುದ್ದ ಇಂಧನದ ಕುರಿತಾದ ಜಾಗತಿಕ ಜಾಗೃತಿ ಮಾದರಿಯಾಗಲಿರುವ ಬೆಳವಣಿಗೆ ಎನಿಸಿದೆ.
ಭಾರತದ ನವೀಕರಿಸಬಹುದಾದ ಇಂಧನಗಳ ಕ್ಷೇತ್ರದ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರುವ ಸಂಕೇತವಾಗಿ, ವಿಶ್ವ ಆರ್ಥಿಕ ವೇದಿಕೆಯ ಮುಖೇನ ಜಾಗತಿಕ ಸಂಪರ್ಕ ಬೆಳೆಸಿಕೊಂಡಿದೆ ಎನ್ನಲಾಗಿದೆ. ಸುಸ್ಥಿರತೆಯನ್ನು ಪ್ರಮಾಣೀಕರಿಸುವ ಹಿನ್ನಲೆಯಲ್ಲಿ, ಗ್ರೀನ್ ಹೈಡ್ರೋಜನ್ ಹಾಗೂ ಸೌರ ತಂತ್ರಜ್ಞಾನ ರಫ್ತುದಾರನನ್ನಾಗಿ ಭಾರತವನ್ನು ಪ್ರತಿನಿಧಿಸುವ ಗುರಿ ಹಾಕಿಕೊಂಡಿದೆ.
ಇತ್ತೀಚೆಗೆ ಬಂದಿರುವ ಮಾಹಿತಿ ಪ್ರಕಾರ, ಭಾರತದ Indian Renewable Energy Development Agency Limited - IREDA ಸಂಸ್ಥೆಯ ಪ್ರದೀಪ್ ಕುಮಾರ್ ಅವರ ಹೇಳಿಕೆಯು ಗಮನ ಸೆಳೆದಿದೆ. ಅವರು, ಹಸಿರು ಇಂಧನ ಕ್ಷೇತ್ರದಲ್ಲಿ ಭಾರತವು ಜಾಗತಿಕ ಉದಾಹರಣೆಯಾಗಿದೆ ಎಂದಿದ್ದಾರೆ. ಈ ಬಗ್ಗೆ ಸಚಿವರು, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. OnePlus Nord Buds 3 Truly Wireless Bluetooth Earbuds with up to 32dB Active Noise Cancellation, 10mins for 11Hours Fast Charging with Up to 43h Music Playback -Harmonic Gray
ಭಾರತವು ಹಸಿರು ಹಾಗೂ ಶುದ್ದ ಇಂಧನ ವಲಯದಲ್ಲಿ ಜಾಗತಿಕ ಕ್ರಾಂತಿಯನ್ನು ಮೂಡಿಸಲು ಹೂಡಿಕೆಯನ್ನು ಆಕರ್ಷಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ, ಹೊಸ ಹೆಜ್ಜೆಯಾಗಿ ದಾವೋಸ್ ಸಮ್ಮೇಳನವು, ಮಹತ್ವದ ದ್ವಿಪಕ್ಷೀಯ ಮಾತುಕತೆಗಳು, ಸಭೆಗಳು ಹಾಗೂ ಜಾಗತಿಕ ಒಪ್ಪಂದಗಳು ಹೂಡಿಕೆ ವಿಶ್ವಾಸಪೂರ್ಣವೆನಿಸಿದೆ. ಇದರಿಂದಾಗಿ ಭಾರತದ ಕ್ಲೀನ್ ಅಂಡ್ ಗ್ರೀನ್ ಎನರ್ಜಿಯ ವಿಸ್ತರಣೆ ಇಂಧನ ಮಾರುಕಟ್ಟೆಯಲ್ಲಿ ಭವಿಷ್ಯವನ್ನು ನಿರೂಪಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಅಂತರೀಕ್ಷ ಅನ್ವೇಷಕಿ ಸುನಿತಾ ವಿಲಿಯಮ್ಸ್ 27 ವರ್ಷಗಳ ವೃತ್ತಿಜೀವನಕ್ಕೆ ವಿದಾಯ!