Skip to main content
ವಿಡಿಯೋ
general

ಭಾರಿ ಜಿಗಿತ ಕಂಡ ಚಿನ್ನ ಬೆಲೆ, ಬೆಳ್ಳಿ ಬೆಲೆಯೂ ಗಗನಚುಂಬಿ - ಒಂದೇ ದಿನಕ್ಕೆ 5000 ಏರಿಕೆ ಯಾಕೆ!?

By Shravanthi R
ಭಾರಿ ಜಿಗಿತ ಕಂಡ ಚಿನ್ನ ಬೆಲೆ, ಬೆಳ್ಳಿ ಬೆಲೆಯೂ ಗಗನಚುಂಬಿ - ಒಂದೇ ದಿನಕ್ಕೆ 5000 ಏರಿಕೆ ಯಾಕೆ!?

ಅಂತರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಗಳ ಆರ್ಥಿಕ ಹಾಗೂ ಇತರ ವಿಕ್ಷಿಪ್ತ ಬೆಳವಣಿಗೆಗಳಿಂದಾಗಿ ಬಂಗಾರ ಹಾಗೂ ಬೆಳ್ಳಿ ಬೆಲೆಗಳು ನಭಕ್ಕೇರಿಕೆಯಾಗಿದೆ. ಇದರ ಪರಿಣಾಮ ದಾಖಲೆ ಮಟ್ಟದಲ್ಲಿ ಗ್ರಾಹಕರನ್ನು ಕಂಗಾಲಾಗಿಸಿದೆ ಎಂದು ವರದಿಯಾಗಿದೆ.

ಅಂತರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಗಳ ಆರ್ಥಿಕ ಹಾಗೂ ಇತರ ವಿಕ್ಷಿಪ್ತ ಬೆಳವಣಿಗೆಗಳಿಂದಾಗಿ ಬಂಗಾರ ಹಾಗೂ ಬೆಳ್ಳಿ ಬೆಲೆಗಳು ನಭಕ್ಕೇರಿಕೆಯಾಗಿದೆ. ಇದರ ಪರಿಣಾಮ ದಾಖಲೆ ಮಟ್ಟದಲ್ಲಿ ಗ್ರಾಹಕರನ್ನು ಕಂಗಾಲಾಗಿಸಿದೆ ಎಂದು ವರದಿಯಾಗಿದೆ. 

ದಿನೇ ದಿನೇ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಇಂದು ಒಂದೇ ದಿನಕ್ಕೆ ಏಕಾಏಕಿ 5000 ರೂ. ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಈ ರೀತಿಯ ಸತತ ಬೆಲೆ ಹೆಚ್ಚಳದಿಂದಾಗಿ, ಚಿನ್ನ ಹಾಗೂ ಬೆಳ್ಳಿ ಲೋಹಗಳನ್ನು ಕೊಳ್ಳುವವರಿಗೆ ಕನಸಲ್ಲೂ ನಿಲುಕದ ಅಮೂಲ್ಯ ಖರೀದಿ ಎನಿಸಿಕೊಂಡಂತಾಗಿದೆ. ಮುಂದಿನ ದಿನಗಳಲ್ಲಿ ಇದರ ಬೇಡಿಕೆ ಹಾಗು ಸಂಗ್ರಹಣೆ ಕುರಿತು ಚರ್ಚೆಗೆ ಗ್ರಾಸವಾಗಲಿದೆ ಎನ್ನಲಾಗಿದೆ. realme Buds T310 Truly Wireless in Ear Earbuds with 46dB Hybrid ANC, 360° Spatial Audio, 12.4mm Dynamic Bass Driver, Upto 40Hrs Battery and Fast Charging (Agile White)

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಕ್ಷಿಪ್ರ ವರ್ತನೆಗಳು, ರಾಜಕೀಯ ಹಾಗೂ ಭೌಗೋಳಿಕ ಉದ್ವಿಗ್ನತೆಗಳು, ಹೂಡಿಕೆ ವೈಪರೀತ್ಯ, ಜಾಗತಿಕ ಅನಿಸ್ಚಿತತೆ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಹಲವು ವಿಭಿನ್ನ ಪ್ರಮುಖಾಂಶಗಳು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣಗಳನ್ನು ಹುಟ್ಟುಹಾಕಿದೆ. ಈ ಪರಿಣಾಮದಿಂದಾಗಿ, ಚಿನ್ನ-ಬೆಳ್ಳಿ ದರಗಳು ಐತಿಹಾಸಿಕ ದಾಖಲೆಯನ್ನು ಕಂಡಿದೆ. 

ಪ್ರಸ್ತುತ ಭಾರತದಲ್ಲಿ, 24k ಗ್ರಾಂ ಚಿನ್ನಕ್ಕೆ 15, 726 ರೂ. ಬೆಲೆ ಇದೆ. 


22k ಗ್ರಾಂ ಚಿನ್ನಕ್ಕೆ 14, 415 ರೂ. ಬೆಲೆ ಇದೆ.


18k ಗ್ರಾಂ ಚಿನ್ನಕ್ಕೆ 11, 794 ರೂ. ಬೆಲೆ ಇದೆ. 


ಹಾಗೂ ಬೆಳ್ಳಿ ಬೆಲೆಯು, ಗ್ರಾಂ ಗೆ 330 ಹಾಗೂ ಕೆ.ಜಿ ಗೆ 3,30,000 ಬೆಲೆ ಇದೆ. ಇದನ್ನೂ ಓದಿ: WEF 2026 - ಪ್ರಲ್ಹಾದ್‌ ಜೋಶಿ ಭಾಗಿತ್ವ - ಹಸಿರು ಇಂಧನದ ಜಾಗತಿಕ ಜಾಗೃತಿ ಮಾದರಿಯಾಗಲಿದೆಯೇ!?

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.