ಕೇಂದ್ರ ಸರ್ಕಾರವು, ದೇಶದಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಉದ್ಯೋಗದಾತ ನಿಲುವಿನೊಟ್ಟಿಗೆ ಪ್ರಸ್ತುತ ಪಡಿಸಿರುವ ಯೋಜನೆಯಾಗಿ, ವಿಬಿ ಜಿ ರಾಮ್ ಜಿ ಅನ್ನು ಪರಿಚಯಿಸಿದೆ. ವಿಕಸಿತ ಭಾರತ ಉದ್ಯೋಗ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯು ಮನರೇಗಾ ಯೋಜನೆಯ ಸುಧಾರಿತ ಹೊಸ ಚೌಕಟ್ಟಿನೊಂದಿಗೆ ಪ್ರಸ್ತುತವಾಗಿದೆ. ಇದುವೆ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಭದ್ರ ಬುನಾದಿ ಹಾಗೂ ಅಭಿವೃದ್ದಿಯ ಕೊಂಡಿ ಬೆಸೆಯುವ ಹೊಸ ಆಯಾಮವಾಗಿದೆ.
ಸುಮಾರು ಕಾಲು ಶತಮಾನದಿಂದ ಇದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (ಮನರೇಗಾ) ಪ್ರಾಯೋಗಿಕತೆ ಅಷ್ಟಾಗಿ ಪರಿಣಾಮಕಾರಿಯಾಗಿರದಿದ್ದ ಹಿನ್ನೆಲೆಯಲ್ಲಿ, ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)( ವಿಬಿ-ಜಿ ರಾಮ್ ಜಿ) ಹೊಸ ಕಾಯ್ದೆಯನ್ನು ಜಾರಿಗೊಳಿಸಿದೆ. ಹಳತರಲ್ಲಿದ್ದ ಅಸಮರ್ಪಕತೆ, ಅನುಷ್ಠಾನ, ಅಕ್ರಮಗಳನ್ನು ತಡೆಯುವ ದೃಷ್ಟಿಕೋನದಿಂದ ಇದನ್ನು ಪರಿಚಿತಗೊಳಿಸುವ ಗುರಿ ಹೊಂದಿದೆ ಎನ್ನಲಾಗಿದೆ.
ಇದರಲ್ಲಿ ಮಹಾತ್ಮ ಗಾಂಧಿಯವರ ಹೆಸರು ಕೈಬಿಡಲಾಗಿರುವುದು ಯೋಜನೆಯ ನೈತಿಕತೆಗೆ ಧಕ್ಕೆ ತರುವುದಿಲ್ಲವೆನ್ನಲಾಗಿದ್ದು, ಕಾಯ್ದೆಯ ಹಕ್ಕು ಹಾಗೂ ಕರ್ತವ್ಯಗಳನ್ನು ಬದಲಾಯಿಸುವುದಿಲ್ಲ ಎಂದಿದೆ. ಗ್ರಾಮೀಣ ಸಬಲತೆ, ಹಾಗೂ ಆರ್ಥಿಕ ಲಾಭದಾಯಕತೆಯನ್ನು ಹೆಚ್ಚಿಸಲು ಇದು ಅವಕಾಶವನ್ನು ತೆರೆದಿಡುವುದು ಎನ್ನಲಾಗಿದೆ.
VB-G RAM G ಪ್ರಾಮುಖ್ಯತೆಗಳು
ಭಾರತವನ್ನು 2047 ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸುವುದಕ್ಕೆ ಪೂರಕವಾಗಿ, 1,51,000 ಕೋಟಿ ರೂ., ಆರ್ಥಿಕ ವ್ಯಯವನ್ನು ಅಂದಾಜಿಸಲಾಗಿದೆ. ಇದರ ಉದ್ದೇಶವು ಪ್ರತ್ಯೇಕ ಗ್ರಾಮೀಣಾಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲದೇ ಎರಡರಲ್ಲೂ ಸಕಾರಾತ್ಮಕ ಫಲಿತಾಂಶ ಹಾಗೂ ಜೀವನೋಪಾಯ ಭದ್ರತೆಯ ಗುರಿ ಹೊಂದಿದೆ.
ರಾಷ್ಟ್ರೀಯ ಮೂಲಭೂತ ಸೌಕರ್ಯಗಳ ಆದ್ಯತೆಯೊಂದಿಗೆ, ಆಡಳಿತ ಹಂತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹಾಗೂ ಪಾರದರ್ಶಕತೆಯನ್ನು ನಿರ್ಮಿಸುವುದಾಗಿದೆ.
ಈ ಕಾಯ್ದೆಯು ಗ್ರಾಮೀಣ ಪ್ರತಿ ಮನೆಗೂ ಕೌಶಲ್ಯರಹಿತ ದೈಹಿಕ ಕಾರ್ಮಿಕ ಕಾರ್ಯಕ್ಕಾಗಿ ವರ್ಷಕ್ಕೆ 125 ದಿನಗಳ ವೇತನಾಧಾರಿತ ಉದ್ಯೋಗಕ್ಕೆ ಕಾನೂನುಬದ್ಧ ಭರವಸೆ ಒದಗಿಸುತ್ತದೆ.
ಮನರೇಗಾ ಅಡಿಯಲ್ಲಿದ್ದ ವಿಭಜಿತ ಕಾಮಗಾರಿಗಳಿಗಿಂತ ಭಿನ್ನವಾಗಿ, ಈ ಕಾಯ್ದೆಯು ದೀರ್ಘಾವಧಿಯ ಆರ್ಥಿಕ ಲಾಭವನ್ನು ಬೆಂಬಲಿಸುವ ತಂತ್ರಾತ್ಮಕ ಹಾಗೂ ದೀರ್ಘಕಾಲಿಕ ಆಸ್ತಿಗಳಿಗೆ ಆದ್ಯತೆ ನೀಡುತ್ತದೆ.
ಭಾರತವನ್ನು 2047 ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸುವ ಮಾರ್ಗಸೂಚಿಯೊಂದಿಗೆ ಗ್ರಾಮೀಣ ಉದ್ಯೋಗ ನೀತಿ.
VB-G RAM G ಏಕೆ?
ಉದ್ಯೋಗ ಸೃಷ್ಟಿ ಹಾಗು ಗ್ರಾಮೀಣ ಆರ್ಥಿಕತೆಯ ಭಾಗವಾಗಿ, ರಚನಾತ್ಮಕ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಇದು ಮುಖ್ಯವಾಗುವುದು. ಸಾಮಾಜಿಕ ಬೇಜವಾಬ್ದಾರಿತನ ಮತ್ತು ಡಿಜಿಟಲ್ ಅಳವಡಿಕೆ ದುರ್ಬಲತೆಯನ್ನು ತಡೆಯುವಲ್ಲಿ ಇದು ದಿಟ್ಟ ಹೆಜ್ಜೆಯಿಡಲಿದೆ. ಅಂದಿನ ಯುಪಿಎ ಸರ್ಕಾರದಲ್ಲಿ ನಡೆದು ಬಂದ ಅವ್ಯವಹಾರಗಳನ್ನು ಮಟ್ಟ ಹಾಕಲು ಮತ್ತು ನಾಗರೀಕರ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಯೋಜನೆಯನ್ನು ಪುರ್ನರಚಿಸುವುದು ಅಗತ್ಯವೆನ್ನಲಾಗಿದೆ. OnePlus Nord Buds 3 Pro Truly Wireless Bluetooth Earbuds with Upto 49dB Active Noise Cancellation,12.4mm Dynamic Drivers,10mins for 11Hrs Fast Charging with Upto 44Hrs Music Playback [Soft Jade]
ಪ್ರಮುಖ ಸಂಗತಿಗಳು
125 ದಿನಗಳ ಖಾತರಿ ವೇತನ ಉದ್ಯೋಗ
ನಿರುದ್ಯೋಗಕ್ಕೆ ಬಲವಾದ ನಿಬಂಧನೆ ಭತ್ಯೆ
ಸಕಾಲಿಕ ವೇತನ ಪಾವತಿ ಮತ್ತು ವಿಳಂಬ ಪರಿಹಾರ
ಗ್ರಾಮ ಸಭೆಯಿಂದ ವಿಕಸಿತ ಗ್ರಾಮ ಪಂಚಾಯತ್ (ವಿಜಿಪಿಪಿ)
ವಿಜಿಪಿಪಿಯಲ್ಲಿ ಎಲ್ಲಾ ಯೋಜನೆಗಳ ಒಮ್ಮುಖ
ತಂತ್ರಜ್ಞಾನದ ಮೂಲಕ ಸಬಲೀಕರಣ
ಒಟ್ಟಾರೆ, ಇದು ರೈತಾಪಿ ಹಾಗು ಉದ್ಯೋಗವನರಸುವ ವರ್ಗಕ್ಕೆ ಪ್ರಸ್ತುತ ಆರ್ಥಿಕ ಹಾಗೂ ಸಾಮಾಜಿಕ ವಾಸ್ತವಿಕತೆಗಳಿಗೆ ಹೊಂದುವಂತೆ, ಪರಿಸ್ಥಿತಿ ಸುಧಾರಿತ ಹಾಗೂ ಪರಿಹಾರ ಕೇಂದ್ರೀಕೃತ ಉದ್ಯೋಗ ಉತ್ಪಾದಕತೆ ಮತ್ತು ಅಭಿವೃದ್ದಿಯತ್ತ ಸಾಗಲು ಹೊಸ ಚೌಕಟ್ಟಿನ ಅಗತ್ಯವನ್ನು ಈ ಕಾಯ್ದೆಯು ಪ್ರತಿಪಾದಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: WEF 2026 - ಪ್ರಲ್ಹಾದ್ ಜೋಶಿ ಭಾಗಿತ್ವ - ಹಸಿರು ಇಂಧನದ ಜಾಗತಿಕ ಜಾಗೃತಿ ಮಾದರಿಯಾಗಲಿದೆಯೇ!?