ರಾಜ್ಯದಲ್ಲಿ ಮುಂಬರುವ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವ್ಯವಸ್ಥೆಯನ್ನು ಜಾರಿ ಮಾಡುವಂತೆ ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ. ಇದಕ್ಕೆ ಪರ-ವಿರೋಧಗಳು ಕೇಳಿಬಂದಿದೆ. ಇನ್ನೇನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮೇ.25 ರ ನಂತರ ನಡೆಯಲಿದ್ದು, ಈ ಬಗ್ಗೆ ರಾಜಕೀಯ ವಾಗ್ವಾದಗಳು ಕೇಳಿಬಂದಿದೆ ಎನ್ನಲಾಗಿದೆ.
ಒಂದು ಕಡೆ, ಬಿಜೆಪಿಯು ಇದನ್ನು ತೀವ್ರವಾಗಿ ಖಂಡಿಸಿದ್ದು, ತಂತ್ರಜ್ಞಾನ ಮುಂದುವರೆದ ಕಾಲದಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಕೆ ಎಷ್ಟು ಸೂಕ್ತ? ಅದಲ್ಲದೇ ಇದರಿಂದ ಸಮಯ ವ್ಯರ್ಥವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದ್ದು, ಡಿ.ಕೆ ಸುರೇಶ್ ಅವರು ಈಗಾಗಲೇ ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಮತ್ತೆ ಬ್ಯಾಲೆಟ್ ಪೇಪರ್‌ಗೆ ಮರಳುವುದು ಬೇಡವೆನಿಸುತ್ತದೆ ಎಂದು ಹೇಳಿಕೆ ನೀಡಿರುವುದು ವರದಿಯಾಗಿದೆ.
ನಮಗೆ ಇವಿಎಂ ಮೇಲೆ ಅನುಮಾವಿದೆ ಎಂದು ಹೆಚ್. ಕೆ ಪಾಟೀಲ್ ಅವರು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡುವ ಮೂಲಕ ಸಿ.ಟಿ ರವಿ ಸುದ್ದಿಯಲ್ಲಿದ್ದಾರೆ. ಬ್ಯಾಲೆಟ್ ಪೇಪರ್ ಬಳಕೆ ತಪ್ಪೇನು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರೆ, ಬ್ಯಾಲೆಟ್ ಪೇಪರ್ ಬಳಸಿದರೂ; ಇಲ್ಲದಿದ್ದರೂ ಬಿಜೆಪಿ ಗೆಲ್ಲುವುದೆಂದು ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾರೆ. OnePlus Buds 4 TWS Earbuds with Upto 55dB Real-time ANC, Adaptive Mode, Dual Drivers and DACs, 3D Audio, Upto 45hrs Music Playback, Dual-Device connectivity, 47ms Low Latency, Storm Gray
ರಾಹುಲ್ ಗಾಂಧಿಯವರ ಮೆಚ್ಚುಗೆ ಗಳಿಸಲು ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಮುಂದುವರೆಯುವ ವೇಳೆ ಹೀಗೆ ಗೊಂದಲವುಂಟು ಮಾಡಬಾರದು ಎಂದು ಮಾಜಿ ಸಂಸದ ಡಿ.ವಿ ಸದಾನಂದಗೌಡ ಅವರು ಹೇಳಿದ್ದಾರೆ. ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸ್ಥಳೀಯ ಚುನಾವಣೆಗಳು ಬ್ಯಾಲೆಟ್ ಪೇಪರ್‌ನಲ್ಲಿಯೇ ನಡೆಯಬೇಕೆಂದು; ನಿಜವಾದ ಮತದಾರರಿಗೆ ಅನ್ಯಾಯವಾಗಬಾರದೆಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: WEF 2026 - ಪ್ರಲ್ಹಾದ್ ಜೋಶಿ ಭಾಗಿತ್ವ - ಹಸಿರು ಇಂಧನದ ಜಾಗತಿಕ ಜಾಗೃತಿ ಮಾದರಿಯಾಗಲಿದೆಯೇ!?