Skip to main content
ವಿಡಿಯೋ
general

ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಹಾಜರಾಗಲಿರುವ ರಾಜ್ಯಪಾಲರು! ಏನಾಗಲಿದೆ ಕಾನೂನು ಬಿಕ್ಕಟ್ಟು?

By Shravanthi R
ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಹಾಜರಾಗಲಿರುವ ರಾಜ್ಯಪಾಲರು! ಏನಾಗಲಿದೆ ಕಾನೂನು ಬಿಕ್ಕಟ್ಟು?

ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಕಾನೂನು ಸಮರ ಉಂಟಾಗುವ ಬೆಳವಣಿಗೆಯಿಂದಾಗಿ ಕಾನೂನು ಬಿಕ್ಕಟ್ಟು ಎದಿರಾಗುವ ಸಾಧ್ಯತೆ ಇತ್ತೆನ್ನಲಾಗಿದೆ. ಇದೀಗ, ರಾಜ್ಯಪಾಲರು ಸದನಕ್ಕೆ ಬರುವುದಾಗಿ ಅಧಿಕೃತ ಸಂದೇಶ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ತಮಿಳುನಾಡಿನಲ್ಲಿ ರಾಜ್ಯಪಾಲರ ವಿವಾದದ ಬೆನ್ನಲ್ಲೇ, ಕರ್ನಾಟಕದ ರಾಜ್ಯಪಾಲರು ವಿಧಾನಸಭೆ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣವನ್ನು ಮಾಡಲು ನಿರಾಕರಣೆ ತೋರಿದ್ದರು. ಬುಧವಾರ(ಜ.21) ಪ್ರಕಟವಾಗಿದ್ದ ಈ ಸುದ್ದಿ ಹಿನ್ನಲೆಯಾಗಿ, ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಕಾನೂನು ಸಮರ ಉಂಟಾಗುವ ಬೆಳವಣಿಗೆ ಕಂಡುಬಂದಿತ್ತು. ಇದೀಗ, ರಾಜ್ಯಪಾಲರು ಸದನಕ್ಕೆ ಬರುವುದಾಗಿ ಅಧಿಕೃತ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. 

ಸರ್ಕಾರ ಸಿದ್ದಪಡಿಸಿದ ಭಾಷಣದ ಪೈಕಿ 11 ಪ್ರಮುಖ ಪ್ಯಾರಗಳನ್ನು ತೆಗೆದು ಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಅದರಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್‌ ಜೊತೆಗೆ ಚರ್ಚಿಸಿ, ಭಾಷಣದಲ್ಲಿ ಯಾವುದೇ ಬದಲಾವಣೆ ಬೇಡ ಎಂಬ ಸಂದೇಶವನ್ನು ತಿಳಿಸಿದ್ದರು. “ಇದುವೆ ರಾಜ್ಯಪಾಲರ ವೈಯಕ್ತಿಕ ಭಾಷಣವಲ್ಲ, ಬದಲಾಗಿ ಸರ್ಕಾರದ ನೀತಿ-ನಿಲುವುಗಳನ್ನು ಪ್ರತಿಬಿಂಬಿಸಿರುವ ಹಾಗೂ ಸಂವಿಧಾನಬದ್ದವಾಗಿ ಅವರು ಇದನ್ನು ಓದಲೇಬೇಕು” ಎಂದು ಸರ್ಕಾರ ವಾದಿಸಿತ್ತು. OnePlus Bullets Wireless Z3 in-Ear Neckband with 12.4mm Drivers, 3D Spatial Audio,10 mins Charge for 27 hrs Playback, 4 EQ preset, Dynamic bass Enhancement & BT5.4

ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 11.15ರ ವರೆಗೆ ರಾಜ್ಯಪಾಲರ ಆಗಮನಕ್ಕಾಗಿ ಸರ್ಕಾರ ಕಾದು ನೋಡುವುದಾಗಿ ತಿಳಿಸಲಾಗಿತ್ತು. ಒಂದು ವೇಳೆ ಅವರು ಬಾರದಿದ್ದಲ್ಲಿ ಅಥವಾ ಭಾಷಣವನ್ನು ಓದಲು ನಿರಾಕರಿಸಿದ್ದಲ್ಲಿ ಒಂದು ಗಂಟೆಯೊಳಗಾಗಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗುವುದು ಎನ್ನಲಾಗಿತ್ತು. ಈ ಕುರಿತು ದೆಹಲಿಗೆ ತೆರಳುವಂತೆ ಮುಖ್ಯಮಂತ್ರಿಗಳು ಅಡ್ವೋಕೇಟ್‌ ಜನರಲ್‌ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. 

ಈ ನಡುವೆ ಸದನಕ್ಕೆ ಅವರು ಹಾಜರಾಗುವುದಾಗಿ ಸ್ಪೀಕರ್‌ ಹಾಗೂ ಮುಖ್ಯಮಂತ್ರಿ ಕಚೇರಿಗೆ ಅಧಿಕೃತ ಸಂದೇಶ ರವಾನೆಯಾಗಿರುವುದಾಗಿ ಲೋಕಭವನದ ಉನ್ನತ ಮೂಲಗಳು ಮಾಹಿತಿ ನೀಡಿದೆ. ಒಟ್ಟಿನಲ್ಲಿ, ಇಂದು ನಡೆಯಲಿರುವ ಅಧಿವೇಶನಕ್ಕೆ ರಾಜ್ಯಪಾಲರು ಯಥಾವತ್ತಾಗಿ ಭಾಷಣ ಓದಲಿದ್ದಾರೆಯೇ ಅಥವಾ ಭಾಷಣವನ್ನು ಟೇಬಲ್‌ ಮಾಡಿ ಹೊರನಡೆಯಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ. ಜನವರಿ 31ರ ವರೆಗೆ ರಾಜ್ಯ ವಿಧಾನಸಭೆ ಅಧಿವೇಶನವು ನಡೆಯಲಿದ್ದು, ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಹೆಸರು ಬದಲಾವಣೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನೂ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಜಿಬಿಎ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಬಳಕೆ - ಕಾಂಗ್ರೆಸ್‌ನಲ್ಲೇ ಅಪಸ್ವರ!?