ಇಂದು ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಲ್ಲಿ ಸದನವನ್ನುದ್ದೇಶಿಸಿ, ಭಾಷಣ ಮಾಡಬೇಕಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಸರ್ಕಾರದ ಭಾಷಣ ಪ್ರತಿ ಓದದೆ, ಹೊರನಡೆದಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಅವರು ಕೇವಲ ಒಂದು ನಿಮಿಷದಲ್ಲಿ ಭಾಷಣ ಮುಗಿಸಿದ ರಾಜ್ಯಪಾಲರೆನಿಸಿದ್ದು, ವಿವಾದಕ್ಕೆ ಒಳಪಟ್ಟಿದೆ ಎನ್ನಲಾಗಿದೆ.
ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸುವುದಾಗಿ ಅಧಿಕೃತ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಅವರು, ಭಾಷಣದ ಪ್ರತಿಯನ್ನು ಓದುವರೇ ಇಲ್ಲವೇ ಎನ್ನುವ ಬಗ್ಗೆ ಕುತೂಹಲ ಮನೆ ಮಾಡಿತ್ತು. ಬಳಿಕ, ಸದನಕ್ಕೆ ಆಗಮಿಸಿ, ಕೆಲವೇ ಕೆಲವು ನಿಮಿಷಗಳ ಭಾಷಣ ಮಾಡಿ ಸದನದಿಂದ ಹೊರನಡೆದಿದ್ದಾರೆ. OnePlus Nord Buds 3r TWS Earbuds up to 54 Hours Playback, 2-mic Clear Calls, 3D Spatial Audio, AI Translation, 12.4mm Drivers, Dual-Device Connectivity, 47ms Low Latency - Ash Black
ಸರ್ಕಾರ ಕೊಟ್ಟ ಭಾಷಣ ಪ್ರತಿಯನ್ನು ಪೂರ್ಣವಾಗಿ ಓದದೇ ಕೆಲವೇ ಮಾತುಗಳಲ್ಲಿ ತಮ್ಮ ಭಾಷಣಕ್ಕೆ ತೆರೆ ಎಳೆದಿರುವ ಬೆಳವಣಿಗೆಯಿಂದಾಗಿ, ವಿಧಾನಸೌದಲ್ಲಿ ಆಕ್ರೋಶ ಉಂಟಾಗಿದೆ ಎನ್ನಲಾಗಿದೆ. ಈ ಘಟನೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಮುಂದಿನ ಸಂವಿಧಾನಿಕ ಪ್ರಶ್ನೆಗಳು ಎದ್ದಿದ್ದು, ಸರ್ಕಾರದ ಮುಂದಿನ ನಡೆಯೇನಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಹಾಜರಾಗಲಿರುವ ರಾಜ್ಯಪಾಲರು! ಏನಾಗಲಿದೆ ಕಾನೂನು ಬಿಕ್ಕಟ್ಟು?