ಬಾಲಿವುಡ್ ನಟ ಆಮಿರ್ ಖಾನ್ ಅವರ ವೈಯಕ್ತಿಕ ಜೀವನ ಯಾವಾಗಲೂ ಅಭಿಮಾನಿಗಳ ಗಮನ ಸೆಳೆಯುತ್ತಲೇ ಬಂದಿದೆ. ಇತ್ತೀಚೆಗೆ ಅವರು ಗೌರಿ ಅವರೊಂದಿಗೆ ಇರುವ ಸಂಬಂಧದ ಬಗ್ಗೆ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಮುಂಬೈನಲ್ಲಿರುವ ಹೊಸ ಮನೆಯಲ್ಲಿ ಒಟ್ಟಿಗೆ ಇದ್ದಾರೆ ಎಂಬ ಮಾತುಗಳು ಹರಡಿದ ಬಳಿಕ, ಅವರ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.Arayna Women's Cotton Printed Floral Straight Kurta with Palazzo Pants and Dupatta
ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಆಮಿರ್ ಖಾನ್, ತಾವು ಮತ್ತು ಗೌರಿ ಪರಸ್ಪರ ತುಂಬಾ ಗಂಭೀರವಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮದುವೆ ಬಗ್ಗೆ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮದುವೆ ಎನ್ನುವುದು ಕೇವಲ ದಾಖಲೆ ವಿಷಯವಲ್ಲ, ಅದು ಮನಸ್ಸಿನ ಸಂಬಂಧ ಎಂದು ಆಮಿರ್ ಹೇಳಿದ್ದಾರೆ.ಡಾ. ರಾಜ್‌ಕುಮಾರ್ ಸಿನಿಮಾ ರೀಮೇಕ್‌ನಲ್ಲಿ ಡಾಲಿ ಧನಂಜಯ್..! ಇಲ್ಲಿದೆ ಮಾಹಿತಿ
ಇನ್ನಷ್ಟು ಹೇಳಿರುವ ಅವರು, “ನನ್ನ ಹೃದಯದಲ್ಲಿ ನಾನು ಈಗಾಗಲೇ ಗೌರಿಯನ್ನು ಮದುವೆಯಾಗಿದ್ದೇನೆ. ಅದನ್ನು ಅಧಿಕೃತವಾಗಿ ಮಾಡಬೇಕೇ ಅಥವಾ ಬೇಡವೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದು ತಿಳಿಸಿದ್ದಾರೆ. ಆಮಿರ್ ಖಾನ್ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.