Skip to main content
ವಿಡಿಯೋ
general

ಯುವ ನಾಯಕತ್ವಕ್ಕೆ ಮನ್ನಣೆ - ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಯಾಗಿ 27 ವರ್ಷದ ಯದುನಂದನ್‌ ವಿ. ಕೆ ನೇಮಕ

By Shravanthi R
ಯುವ ನಾಯಕತ್ವಕ್ಕೆ ಮನ್ನಣೆ - ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಯಾಗಿ 27 ವರ್ಷದ ಯದುನಂದನ್‌ ವಿ. ಕೆ ನೇಮಕ

27 ವರ್ಷದ ಯುವ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಯದುನಂದನ್‌ ವಿ.ಕೆ ಅವರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್‌. ಹರೀಶ್‌ ಅವರು ಹೊರಡಿಸಿರುವ ಅಧಿಕೃತ ಆದೇಶದನ್ವಯ ಅವರ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಯುವ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಯದುನಂದನ್‌ ವಿ.ಕೆ ಅವರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್‌. ಹರೀಶ್‌ ಅವರು ಹೊರಡಿಸಿರುವ ಅಧಿಕೃತ ಆದೇಶದನ್ವಯ ಅವರ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. 

ಇತ್ತೀಚೆಗೆ, ನಿತಿನ್‌ ನಬಿನ್‌ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಕೇಂದ್ರ ಕಚೇರಿಯಲ್ಲಿ ಘೋಷಿಸಲಾಯಿತು. ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವ ನಾಯಕತ್ವವನ್ನು ಬಣ್ಣಿಸಿದ್ದರು. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ 27 ವರ್ಷದ ಯದುನಂದನ್‌ ಅವರನ್ನು ನೇಮಿಸಲಾಗಿದೆ. ಜಿಬಿಎ ಚುನಾವಣೆ ಸಂದರ್ಭದಲ್ಲಿ ಈ ಬೆಳವಣಿಗೆಗಳು ಪಕ್ಷದ ವರ್ಚಸ್ಸನ್ನು ಹುರಿದುಂಬಿಸಿದೆ ಎನ್ನಲಾಗಿದೆ.

ಈ ಬಗ್ಗೆ ವಿಶ್ವಾಸಪೂರ್ಣ ಅಭಿನಂದನೆಯನ್ನು ಹೇಳುತ್ತಾ, ತಮ್ಮ ಚಿಕ್ಕ ವಯಸ್ಸಿನಲ್ಲೇ ಈ ಹೊಣೆಗಾರಿಕೆ, ಸಂಘಟನಾ ಚತುರತೆ ಹಾಗೂ ರಾಜಕೀಯ ಜವಾಬ್ದಾರಿಯನ್ನು ಹೊಂದುವ ಮೂಲಕ ಅವರು ಗಮನಸೆಳೆದಿದ್ದಾರೆ. ಅವರ ನಾಯಕತ್ವ ಗುಣ ಹಾಗೂ ಸಾಮಾಜಿಕ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತಾ ಪಕ್ಷದ ಯಶಸ್ಸಿಗೆ ಪಾತ್ರರಾಗುವಲ್ಲಿ ಅವರಿಗೆ ಶುಭಾಶಯಗಳನ್ನು ಕೋರಲಾಗಿದೆ. ಇದನ್ನೂ ಓದಿ: ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನ - ಕೆಲ ನಿಮಿಷಗಳಲ್ಲಿ ಭಾಷಣ ಅಂತ್ಯಗೊಳಿಸಿ ಸದನದಿಂದ ಹೊರನಡೆದ ರಾಜ್ಯಪಾಲರು!