ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ 2026 ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು, ಜಾಗತಿಕವಾಗಿ ಎಐ ಚಾಲಿತ ಶುದ್ದ ಇಂಧನ ಕಾರ್ಯತಂತ್ರದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಇದರೊಟ್ಟಿಗೆ, ಅನೇಕ ವಿಚಾರ ವಿನಿಮಯದ ಅಂಶಗಳು ಗಮನ ಸೆಳೆದಿದೆ.
ಭಾರತವು ಶುದ್ದ ಇಂಧನ ಪರಿವರ್ತನೆಯಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯಿಡಲು ಮುಂದಾಗಿದೆ. ಇದಕ್ಕಾಗಿ ಕೃತಕಬುದ್ದಿಮತ್ತೆಯ `ಜಾಗತಿಕ ಮಿಷನ್’ ಸ್ಥಾಪನೆಗೆ ಒಲವು ತೋರಿದೆ. ಈ ಕುರಿತ "ಕಾಲ್ ಟು ಆಕ್ಷನ್: ಸ್ಪಾಟ್‌ಲೈಟ್ ಆನ್ ದಿ ಗ್ಲೋಬಲ್ ಮಿಷನ್ ಆನ್ ಎಐ ಫಾರ್ ಎನರ್ಜಿ" ಶೀರ್ಷಿಕೆಯಡಿ ಆಯೋಜಿಸಿದ್ದ ಮಹತ್ವದ ಅಧಿವೇಶನದಲ್ಲಿ ಕೇಂದ್ರ ಸಚಿವರು ತಮ್ಮ ವಿಸ್ತೃತ ಭಾಷಣವನ್ನು ಮಂಡಿಸಿದರು. Boat Nirvana Space, 360 Spatial Audio, Active Noise Cancellation (~32dB), 100Hrs Battery,4Mics ENx, Fast Charge, v5.3 Bluetooth TWS in Ear Earbuds Wireless Earphones with mic (Celestial White)
ಈ ನಿಟ್ಟಿನಲ್ಲಿ, ಭಾರತವು ಜಾಗತಿಕವಾಗಿ ಹೊಂದಿರುವ ಗಮನಾರ್ಹ ಅಂಶಗಳೆಂದರೆ:
ಭಾರತವು ಆರ್ಥಿಕತೆ, ಹೂಡಿಕೆಗಳ ಸ್ಥಿತಿಸ್ಥಾಪಕತ್ವ ಕಾಪಾಡುವುದು.
ಅಭಿವೃದ್ದಿ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ ಸಹಾಕಾರ ಹೊಂದುವುದು.
ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಪರಿಹಾರಗಳನ್ನು ಕಾಣುವುದು.
ಡಿಜಿಟಲೀಕರಣ, ಎಐ ಚಾಲಿತ ಮುನ್ಸೂಚನೆ, ಪರಿಣಾಮಕಾರಿ ಆಧುನೀಕರಣ ನಿಯೋಜನೆ ಮೂಲಕ ಗ್ರೀನ್ ಹೈಡ್ರೋಜನ್, ಮೇಕ್‌ಇನ್‌ಇಂಡಿಯಾವನ್ನು ಸಾಕಾರಗೊಳಿಸುವುದು.
ನವೀಕರಿಸಬಹುದಾದ ಇಂಧನ ಮೂಲಗಳ ಅವಿಶ್ರಾಂತ ಪ್ರಗತಿ ಭವಿಷ್ಯವನ್ನು ರೂಪಿಸುವತ್ತ ಹೆಜ್ಜೆಯಿಡುವುದು.
ವಿವಿಧ ರಾಷ್ಟ್ರಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿರುವ ಸಚಿವರು, ಇಂಧನ ವಲಯದಲ್ಲಿ ಭಾರತವು ಕೃತಕಬುದ್ದಿಮತ್ತೆಯ ಸಾಮರ್ಥ್ಯ ಹಾಗೂ ಚಿಂತನಾಬದ್ದತೆಯನ್ನು ತೋರಿದೆ. ಗ್ರಿಡ್ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ ಹಾಗೂ ನಷ್ಟ - ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ. ಇದಲ್ಲದೇ, ಶುದ್ದ ಇಂಧನ ನಾಯಕತ್ವ, ಸಹಯೋಗ ಹಾಗೂ ಹೂಡಿಕೆಗೆ ಭಾರತವು ವಿಸ್ತರಿಸುವ ಪರಿಸರ ವ್ಯವಸ್ಥೆಯಲ್ಲಿ ಆಸಕ್ತಿಯನ್ನು ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‌ಐಆರ್ ಪ್ರಕ್ರಿಯೆ: 'ಚುನಾವಣಾ ಆಯೋಗದ ಅಧಿಕಾರ ಅಬಾಧಿತವೇ?' - ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ