ರಾಜ್ಯದಲ್ಲಿ ಮುಂಬರುವ ಚುನಾವಣೆಗಳಿಗೆ ಸಕಲ ಸಿದ್ದತೆಗಳನ್ನು ಬಿರುಸಿನಿಂದ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ, ಇವಿಎಂ ಮೂಲಕ ಮತದಾನ ಬದಲಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ʻಮತಚೋರಿʼ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿರುವ ಬೆನ್ನಲ್ಲೇ, ಈ ಬೆಳವಣಿಗೆಯು ಪ್ರಸ್ತುತ ಚರ್ಚೆಗೀಡು ಮಾಡಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮತದಾನ ಪ್ರಕ್ರಿಯೆ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವುದು ತಪ್ಪೇನು ಎಂದು ಚುನಾವಣಾ ಆಯುಕ್ತ ಜಿ. ಎಸ್ ಸಂಗ್ರಶಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ವಿಶೇಷ ಕಾರಣ ಏನೂ ಇಲ್ಲ. ಮತದಾನಕ್ಕೆ ಇವಿಎಂ ಮತ್ತು ಬ್ಯಾಲೆಟ್ ಪೇಪರ್ ಆಯ್ಕೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ನ್ಯಾಯಾಲಯಗಳು ಬ್ಯಾಲೆಟ್ ಪೇಪರ್ ನಿಷೇಧಿಸಿಲ್ಲ. ಕಾಯ್ದೆ ಪ್ರಕಾರವೇ ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆಗಳನ್ನು ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯ ಚುನಾವಣಾ ಆಯೋಗವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದಿರುವರು. boAt 2026 Launch Nirvana Crown, SONIC ARC, LEDs, Haptic Feedback,50dB Hybrid ANC,Spatial Audio, 6 Mic ENx, App Support, v6.0 Bluetooth Earbuds, TWS Ear Buds Wireless Earphones with mic (Gunmetal Grey)
ಈ ದೇಶದ ಉಪರಾಷ್ಟ್ರಪತಿ, ರಾಷ್ಟ್ರಪತಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮುಖಾಂತರ ನಡೆಸಲಾಗುತ್ತಿದೆ. ಬ್ಯಾಲೆಟ್ ಪೇಪರ್ ಬಳಕೆ ಕಾರಣಕ್ಕೆ ಶಿಲಾಯುಗಕ್ಕೆ ವಾಪಸ್ ಎಂದು ಹೇಳಲು ಸಾಧ್ಯವಿಲ್ಲ. ಜಾಗತಿಕ ಉದಾಹರಣೆಯಾಗಿ ಅಮೆರಿಕ, ಜರ್ಮನಿ, ಜಪಾನ್ ಮೊದಲಾದ ದೇಶಗಳು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿದೆ. ಇಲ್ಲಿ ಇವಿಎಂ ಬೇಕು ಅಥವಾ ಬೇಡ ಎಂಬ ಪ್ರಶ್ನೆ ಇಲ್ಲ. ಕಾನೂನಿನಲ್ಲಿರುವ ವ್ಯವಸ್ಥೆಯನ್ನು ನಾವು ಬಳಸುತ್ತಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ 2026 - AI ಚಾಲಿತ ಶುದ್ದ ಇಂಧನ ಕಾರ್ಯತಂತ್ರ ಅಗತ್ಯ ಪ್ರತಿಪಾದಿಸಿದ ಪ್ರಲ್ಹಾದ್ ಜೋಶಿ