ದೆಹಲಿಯಲ್ಲಿ ಗುರುವಾರ(ಜ.22) ರಂದು, ಮುಂಬರಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಚುನಾವಣೆಯ ಹಿನ್ನಲೆಯಾಗಿ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಜಿಬಿಎ ಚುನಾವಣೆ ಉಸ್ತುವಾರಿಯಾಗಿರುವ ರಾಮ್ ಮಾಧವ್ ಅವರೊಡಗೂಡಿ ಮಹತ್ವದ ಸಭೆ ನಡೆಸಿದರು ಎಂದು ವರದಿಯಾಗಿದೆ. ಇದೇ ವೇಳೆ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರಿಗೆ ರಾಮ್ ಮಾಧಮ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜಿಬಿಎ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಚುನಾವಣೆಗೆ ಸಂಬಂಧಪಟ್ಟ ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಅವರನ್ನು ಭೇಟಿ ಮಾಡುವ ಮೂಲಕ ಮತದಾರರ ಮನೋಭಾವ, ಎದುರಾಳಿ ಪಕ್ಷಗಳ ತಂತ್ರಗಳು ಹಾಗೂ ಸ್ವಪಕ್ಷದ ಸವಾಲುಗಳನ್ನು ಸೇರಿದಂತೆ ವಿವಿಧ ವಿಚಾರಗಳ ಕುರಿತು ನಬಿನ್ ಅವರು ನೇರ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. Sony WH-1000XM6 The Best Wireless Noise Canceling Headphones, HD NC Processor QN3, 12 Microphones, Adaptive NC Optimizer, Mastered by Engineers, Studio-Quality- Midnight Blue
ಅವರು ಚುನಾವಣೆ ಕುರಿತಂತೆ ಸ್ಪಷ್ಟ ಮಾರ್ಗಸೂಚಿ ನೀಡಲಿರುವ ಬಗ್ಗೆ ತಿಳಿಸಲಾಗಿದ್ದು, ರಾಜ್ಯ ಘಟಕದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ರಾಷ್ಟ್ರೀಯ ಅಧ್ಯಕ್ಷರು ಸಲಹೆಗಳನ್ನು ಸೂಚಿಸಿದ್ದಾರೆಂದು ಮಾಹಿತಿ ಮೂಲಗಳ ಪ್ರಕಾರ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ, ಉನ್ನತ ಮಟ್ಟದ ಸಭೆಗಳು ಸೇರಿ ಅವರ ಮಾರ್ಗದರ್ಶನದಂತೆ ಸಿದ್ದತೆ ನಡೆಸಲಾಗುವುದೆಂದು ಹೇಳಲಾಗಿದೆ. ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಿದರೆ ತಪ್ಪೇನು? - ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ