ಇಂದು ಭಾರತದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಹುಟ್ಟಿದ ದಿನ. ಅವರ ನೆನಪಿಗಾಗಿ ಭಾರತ ಸರ್ಕಾರವು 2021 ರಲ್ಲಿ, ʻಪರಾಕ್ರಮ ದಿವಸ್ʼ ಎಂದು ಆಚರಿಸಲು ನಿರ್ಧರಿಸಿತು. 129ನೇ ಜಯಂತಿಯಂದು ಅವರ ತ್ಯಾಗ, ಸ್ಪೂರ್ತಿ ಹಾಗೂ ಹೋರಾಟದ ಸ್ಮರಿಕೆಗೆ ದೇಶದ ಗಣ್ಯರು ಸೇರಿದಂತೆ ಎಲ್ಲರೂ ಗೌರವ ಸೂಚಿಸಿದ್ದಾರೆ.
ಸ್ವಾತಂತ್ರ್ಯ ಸೇನಾನಿ ನೇತಾಜಿಯವರ ಪ್ರೇರಣಾತ್ಮಕ ನುಡಿಗಳು, ದೇಶಸೇವೆ ಹಾಗೂ ಕೊಡುಗೆಗೆ ಈ ದಿನವನ್ನು ಮೀಸಲಾಗಿರಿಸಲಾಗಿದೆ. "ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ ಅದನ್ನು ನಾವೇ ಪಡೆಯಬೇಕು"; ದೇಶವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿಲ್ಲ ಎಂದ ಅವರು, ನಿಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇಡಿ, ಎರವಲು ಪಡೆದ ಶಕ್ತಿ ಎಂದಿಗೂ ನಿಮಗೆ ಮಾರಕ ಎನ್ನುವ ಮೂಲಕ ಏಕವ್ಯಕ್ತಿಯಿಂದ ಒಂದುಗೂಡಿರುವ ದೇಶದವರೆಗೆ ತಮ್ಮ ಪ್ರೇರಾಣಾತ್ಮಕ ಸ್ಪೂರ್ತಿ ಸಂದೇಶ ಸಾರಿದ್ದಾರೆ. Avantree Relay - Premium Airplane Bluetooth 5.3 Adapter, Supports 2 AirPods or Headphones with aptX Adaptive & Low Latency, 3.5mm AUX Jack Wireless Audio Transmitter for Planes, Airline, Travel, TV
ತಾಯ ಮಮತೆ, ಪ್ರೀತಿ ನಿಸ್ವಾರ್ಥ ಎನ್ನುತ್ತಲೇ ಭಾರತಮಾತೆಗೂ ವಂದಿಸಿದ ಅವರ ಸ್ವಾತಂತ್ರ್ಯ ಹೋರಾಟದ ಹಾದಿ ಮುಂದಿನ ಪೀಳಿಗೆಗೂ ತಿಳಿಯಬೇಕಿದೆ. ಯುವಕರಿಗೆ ಪ್ರೇರಣೆಯಾಗಿ, ನಾಯಕತ್ವದ, ಚಳುವಳಿ ಹಾಗೂ ಅಚಲ ನಂಬಿಕೆಯ ಮೂರ್ತಸ್ವರೂಪವಾಗಿ ಅವರು ಕಾಣಬೇಕಿರುವ ಅವಶ್ಯಕತೆಯಿದೆ. ಅವರ ಕುರಿತ ಇತಿಹಾಸವನ್ನು ಗತಕಾಲಕ್ಕೇ ಸೇರಿಸದೇ ನವಕಾಲಕ್ಕೂ ಪಸರಿಸಬೇಕಿದೆ. ಇದನ್ನೂ ಓದಿ: ಜಿಬಿಎ ಚುನಾವಣೆಗೆ ಬಿಜೆಪಿ ಸಿದ್ದತೆ - ನಿತಿನ್ ನಬಿನ್ ಹಾಗೂ ರಾಮ್ ಮಾಧವ್ ಮಹತ್ವದ ಭೇಟಿ!