ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ನಿಷೇಧ ಜಾರಿಗೆ ತಂದ ಮಾದರಿಯನ್ನು ಆಂಧ್ರಪ್ರದೇಶ ಸರ್ಕಾರವು ಅಳವಡಿಸಿಕೊಳ್ಳುವ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸುತ್ತಿರುವುದಾಗಿ ಅಲ್ಲಿನ ಮಾಹಿತಿ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಅವರು ದಾವೋಸ್‌ನ ಆರ್ಥಿಕ ವೇದಿಕೆ ಸಮ್ಮೇಳನದ ಭಾಗಿ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದಲ್ಲೂ ಇಂತಹ ಕಾನೂನಿನ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಅವರು, ಮಕ್ಕಳಿಗೆ ಸೋಷಿಯಲ್ ಮೀಡಿಯಾದ ಸಾಧಕ-ಬಾಧಕಗಳ ಅರ್ಥವಾಗದ ಹಾಗೂ ಅವರ ಮಾನಸಿಕ ಆರೋಗ್ಯಕ್ಕೆ ಸುರಕ್ಷಿತವಲ್ಲದ ಪ್ರಭಾಗಳ ಬಗ್ಗೆ ಕಾಳಜಿವಹಿಸುವುದು ಅವಶ್ಯಕ ಎಂದಿದ್ದಾರೆ. Bose QuietComfort Wireless Noise Cancelling Headphones, Bluetooth Over Ear Headphones with Up to 24 Hours of Battery Life, Twilight Blue - Limited Edition
ಇದಕ್ಕೆ ಪ್ರತಿಕ್ರಿಯಿಸಿದ ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿ, ಸಾಮಾಜಿಕ ಮಾಧ್ಯಮವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಆನ್‌ಲೈನ್‌ನಲ್ಲಿ ಉಚಿತವಾಗಿ ಸಿಗುವ ನಕಾರಾತ್ಮಕ ಹಾಗೂ ಹಾನಿಕಾರಕ ವಿಷಯಗಳನ್ನು ಗ್ರಹಿಸುವಷ್ಟು ಭಾವನಾತ್ಮಕವಾಗಿ ಪ್ರಬುದ್ದರಾಗಿರುವುದಿಲ್ಲ. ಈ ಬಗ್ಗೆ ಅವರನ್ನು ರಕ್ಷಿಸುವ ಗುರಿ ಹೊಂದಿದ್ದು, ಅದಕ್ಕಾಗಿಯೇ ಆಂಧ್ರಪ್ರದೇಶ ಸರ್ಕಾರವು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡುತ್ತಿದೆ ಎಂದರು. ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ - ʻಪರಾಕ್ರಮ ದಿವಸ್ʼ ಆಚರಣೆ