Skip to main content
ವಿಡಿಯೋ
webstory

National Girl Child Day 2026: ಹೆಣ್ಣುಮಕ್ಕಳ ಸಬಲೀಕರಣ ಮತ್ತು ಸುರಕ್ಷತೆಯ ಅಸಲಿ ಚಿತ್ರಣ ಹೇಗಿದೆ!?

By Shravanthi R
National Girl Child Day 2026: ಹೆಣ್ಣುಮಕ್ಕಳ ಸಬಲೀಕರಣ ಮತ್ತು ಸುರಕ್ಷತೆಯ ಅಸಲಿ ಚಿತ್ರಣ ಹೇಗಿದೆ!?

ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೆಣ್ಣುಮಗಳಿಗಿರುವ ಹಕ್ಕು, ಬದುಕು, ಶಿಕ್ಷಣ, ಆರೋಗ್ಯದ ಸಂಬಂಧವಾಗಿ ಇರುವ ಪ್ರಾಮುಖ್ಯತೆಯನ್ನು ತಿಳಿಸುವುದು ಇದರ ಮಹೋದ್ದೇಶ ಹಾಗೂ ವಿಶೇಷತೆ ಎಂದು ತಿಳಿಸಲಾಗಿದೆ.

2008 ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯವು ಈ ದಿನವನ್ನು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವೆಂದು ಆಚರಿಸಿದೆ. ಸಮಾಜದಲ್ಲಿ ಲಿಂಗತಾರತಮ್ಯವನ್ನು ಹೋಗಲಾಡಿಸುವ, ಹೆಣ್ಣೆಂದರೆ ಜರಿಯುವ ಮನಸ್ಥಿತಿಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಗತ್ಯವಿದೆ. ಆದರೆ, ವಾಸ್ತವದಲ್ಲಿ ವರದಿಗಳು ಹೇಳುವಂತೆ, ಇನ್ನೂ ಮಹಿಳಾ ಪ್ರಗತಿ, ಸಾಧನೆಯು ಕೆಲ ಕಾಗದದ ಮೇಲೆ ಕಾಣಿಸಿಕೊಳ್ಳಲಿದೆ ಮಾತ್ರ, ಕಾಣದ ಜೀವನಗಳು ಕಣ್ಮರೆಯಾಗುತ್ತಿದೆ ಎನ್ನಲಾಗಿದೆ. 

ಮಹಿಳೆಯರ ವಿರುದ್ದದ ಅಪರಾಧ ಕೃತ್ಯಗಳು, ಕ್ರೌರ್ಯ ಪ್ರವರ್ತನೆಗಳು ಸುದ್ದಿವರದಿಯಾಗುತ್ತಲೇ ಇವೆ. ಅಂಕಿ-ಅಂಶಗಳ ಪ್ರಕಾರ, ಶಿಕ್ಷಣ ಕ್ಷೇತ್ರದಲ್ಲೂ ಹೆಣ್ಣುಮಕ್ಕಳ ದಾಖಲಾತಿ ಅರಿವಿನ ಕೊರತೆಯನ್ನು ತೋರುವಂತಾಗಿದೆ. ಸಮಾನತೆ ಎನ್ನುವುದು ಹೆಣ್ಣು ಗಂಡಿನ ಸಮ ಎಂಬುದಷ್ಟೇ ಅಲ್ಲದೇ, ಒಬ್ಬರ ಮನೆ ಬೆಳಗುವುದಕ್ಕೆ ಮಾತ್ರವಾಗದೇ, ಮತ್ತೊಬ್ಬರ ಜೀವನವನ್ನು, ಮತ್ತವರ ಮಾನವನ್ನು ಗೌರವಿಸುವ ಸೂಕ್ಷ್ಮತೆ, ಅರಿವ ಕಲಿಕೆ ಹಾಗೂ ವಿದ್ಯೆಗೆ ಪ್ರೇರೇಪಿಸುವುದೂ ಆಗಿರುತ್ತದೆ. Sonos Era 100 | Smart Speaker with WiFi, Bluetooth, Amazon Alexa - Black

“ಒಂದು ಸಮುದಾಯದ ಪ್ರಗತಿಯನ್ನು ಅಲ್ಲಿನ ಮಹಿಳೆಯರ ಪ್ರಗತಿಯಿಂದ ಕಾಣಲಾಗುತ್ತದೆ” ಎಂದು ಹೇಳಿರುವ ಡಾ. ಬಿ. ಆರ್‌ ಅಂಬೇಡ್ಕರ್‌, ಮಹಿಳಾ ಅಭಿವೃದ್ದಿ ದೃಷ್ಟಿಕೋನದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಸಮಾಜದಲ್ಲಿ ಅಸಮಾನತೆಗಳು ತಾಂಡವವಾಡುತ್ತಿರುವ ಸಂದರ್ಭದಲ್ಲಿ, ಆಕೆಗೆ ಶಿಕ್ಷಣ, ಕಾನೂನು, ಕೆಲಸ, ರಾಜಕೀಯ ಪ್ರಾತಿನಿಧ್ಯಗಳು ದೊರಕುವಲ್ಲಿ ಎಷ್ಟು ಸತ್ಯವಿದೆ ಎಂದು ತಿಳಿಯಬೇಕಿದೆ. ಓರ್ವ ಹೆಣ್ಣಿಗಿರುವ ಎಲ್ಲಾ ಸಾಮಾಜಿಕ ಘನತೆಗಳನ್ನು ನೀಡಬೇಕಾದುದು ನಿಜವಾದ ಮಹಿಳಾ ಅಭಿವೃದ್ದಿಯ ಲಕ್ಷಣ. ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ನಿಷೇಧ - ಆಂಧ್ರ ಸರ್ಕಾರದಲ್ಲೂ ಜಾರಿಗೆ ಚಿಂತನೆ - ಸಚಿವ ನಾರಾ ಲೋಕೇಶ್‌