ಸುಪ್ರೀಂಕೋರ್ಟ್‌ನ ಆದೇಶದಂತೆ ಜೂನ್ 30 ರೊಳಗೆ ಜಿಬಿಎ ಚುನಾವಣೆ ನಡೆಸಲು ಸಿದ್ದತೆಗಳು ಚುರುಕುಗೊಂಡಿದೆ. ಈ ಮಧ್ಯೆ ಮಹಿಳಾ ಮೀಸಲಾತಿ ಹಂಚಿಕೆ ಕುರಿತು ತಾಕೀತುಗಳು ಕೇಳಿಬಂದಿದ್ದು, ಸಾರ್ವಜನಿಕರಿಂದ ಪ್ರಾಧಿಕಾರಕ್ಕೆ ಸುಮಾರು 700 ಆಕ್ಷೇಪಣೆಗಳು ಸಲ್ಲಿಕೆಯಾಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಪ್ರಾಧಿಕಾರದ ಮುಖ್ಯ ಆಯುಕ್ತರಾಗಿರುವ ಎಂ.ಮಹೇಶ್ವರ್ ರಾವ್ ಅವರು, ಮತದಾರರ ಪಟ್ಟಿಯನ್ನು ಖುದ್ದು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಐದು ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮೀಸಲಾತಿಗೆ 50% ಮಹಿಳಾ ಮೀಸಲು ಭರವಸೆ ನೀಡಿದ್ದ ಸರ್ಕಾರ, 369 ವಾರ್ಡ್‌ಗಳ ಪೈಕಿ 176 ವಾರ್ಡ್‌ಗಳಲ್ಲಿ ಮಾತ್ರ ಮೀಸಲಾತಿ ಹಂಚಿಕೆಯಾಗಿದ್ದು, ಶೇ. 47.7ರಷ್ಟು ಮಾತ್ರ ಮೀಸಲು ಸಿಕ್ಕಂತಾಗಿದೆ. ಇನ್ನೂ 9 ವಾರ್ಡ್‌ಗಳಲ್ಲಿ ಮೀಸಲು ನೀಡಬೇಕಿದೆ ಎಂದು ವರದಿಯಾಗಿದೆ. ಬಹುತೇಕ ಮಹಿಳಾ ಮೀಸಲು ಹಂಚಿಕೆ ಕುರಿತಾಗಿ 700 ಆಕ್ಷೇಪಣೆಗಳು ಸಲ್ಲಿಕೆಯಾಗಿದೆ ಎನ್ನಲಾಗಿದೆ. Marshall Middleton II Bluetooth Portable Bluetooth Speaker, Over 30 Hours Playtime, IP67 Waterproof - Cream
ಇನ್ನೊಂದೆಡೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಖುದ್ದು ಪರಿಶೀಲಿಸಿ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಸೂಚಿಸಿದ್ದಾರೆ. ಜನವರಿ 22 ರಂದು ರಾಜ್ಯ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ. ನಗರದ ಟೌನ್‌ಹಾಲ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾಡಿನಲ್ಲಿ ಗಣರಾಜ್ಯೋತ್ಸವ ಸಂಭ್ರಮ - ಸರ್ಕಾರ ಸಿದ್ದಪಡಿಸಿದ ಭಾಷಣ ಓದಿದ ರಾಜ್ಯಪಾಲರು