ದೇಶದ ಐತಿಹಾಸಿಕ 77 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ, ಭಾರತದ ಗಗನಯಾತ್ರಿ ಹಾಗೂ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆದ ಶುಭಾಂಶು ಶುಕ್ಲಾ ಅವರಿಗೆ ಶಾಂತಿ-ಶೌರ್ಯವನ್ನು ಸಾರುವ ಪ್ರಶಸ್ತಿಯಾದ ಅತ್ಯುನ್ನತ ʻಅಶೋಕ ಚಕ್ರʼ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿರುವ ಅವರು, ಇದು ಭಾರತದ ಜನರು ಸಾಮೂಹಿಕವಾಗಿ ನೀಡಿದ ಆಶೀರ್ವಾದವೆಂದು ಬಣ್ಣಿಸಿದ್ದಾರೆ. ಬಾಹ್ಯಾಕಾಶ ಹಾಗೂ ವಾಯುಪಡೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಅವರು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Sonos Era 10