ಸದ್ಯ ಅಂತರ್ಜಾಲದ ತುಂಬೆಲ್ಲಾ ಈ ಎರಡು ಜೀವಚರಗಳದ್ದೇ ಸದ್ದು. ಜನರ ಗಮನ ಸೆಳೆದಿರುವ ಪೆಂಗ್ವಿನ್ ಕಥೆ ಒಂದೆಡೆಯಾದರೆ, ʻಅಲೋಕʼ ಎಂಬ ʻಪೀಸ್ ಡಾಗ್ʼ ಬಗ್ಗೆ ಪೀಕ್ ಲೆವೆಲ್ ಟಾಕ್ಸ್ ಕೇಳಿಬಂದಿದೆ. ಈ ಎರಡೂ ಪ್ರಾಣಿಗಳು ಹೇಳುತ್ತಿರುವ ಸಾಮತ್ಯೆಯ ದರ್ಶನಗಳೆಂದರೆ ಮನುಷ್ಯ ಬಯಸುವ ಶಾಂತಿ ಹಾಗೂ ಏಕಾಂತತೆ.
ಶಾಂತಿದೂತ ಅಲೋಕ -
ಬಿಕ್ಕುಗಳ ಜೊತೆಗೆ ವಿಶ್ವ ಶಾಂತಿನಡಿಗೆಗೆ ಹೆಜ್ಜೆ ಹಾಕಿರುವ ಭಾರತದ ಬೀದಿನಾಯಿ ಅಲೋಕ. ಬೌದ್ದ ಸನ್ಯಾಸಿಗಳು ಪಾದಯಾತ್ರೆಗೆ ಕರೆದುಕೊಂಡಿರುವ ಈ ನಾಯಿಗೆ ವಿಶೇಷವಾಗಿ ಹೃದಯದ ಗುರುತನ್ನು ನೀಡಿ ಸಹಾನುಭೂತಿ ಸಂಕೇತವನ್ನು ನೀಡಲಾಗಿದೆ. ರೀಲ್ಸ್‌ಗಳಲ್ಲಿ ಪ್ರೀತಿಪೂರ್ವಕವಾಗಿ ಕಾಣುತ್ತಿರುವ ಈ ನಾಯಿಯು ʻಪೀಸ್ ಡಾಗ್ʼ ಎಂದು ನಾಮಕರಣಗೊಂಡಿದೆ. ಆದರೂ ತನ್ನ ಗುಣವಿಶೇಷಣವನ್ನು ಹಾಗೇ ಉಳಿಸಿಕೊಂಡಿದೆ. ಇದು ಸ್ವಯಂಕೃತ ನೆಮ್ಮದಿಯ ಸಂಕೇತ ಎನ್ನಬಹುದು. Bose QuietComfort Wireless Noise Cancelling Headphones, Bluetooth Over Ear Headphones with Up to 24 Hours of Battery Life, Twilight Blue - Limited Edition
ಒಂಟಿ ಪಯಣಿಗ ʻನಿಹಿಲಿಸ್ಟ್ ಪೆಂಗ್ವಿನ್ʼ -
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಿದ್ದಿ ಹೊಂದುತ್ತಿರುವ ಮತ್ತೊಂದು ಪ್ರಾಣಿ ಪೆಂಗ್ವಿನ್. ಏಕಾಂಗಿಯಾಗಿ ಐಸ್‌ಲ್ಯಾಂಡ್ ಒಳಪ್ರದೇಶದೆಡೆಗೆ ಸಾಗುತ್ತಿರುವ ಇದರ ದೃಶ್ಯ ವೈರಲ್ ಆಗಿದೆ. ಇದು ನೆಟ್ಟಿಗರ ಗಮನ ಸೆಳೆದಿದ್ದು, ಜನರು ಇದಕ್ಕೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಿದ್ದಾರೆ. 2007ರಲ್ಲಿ ಬಿಡುಗಡೆಯಾದ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಎಂಬ ಸಾಕ್ಷ್ಯಚಿತ್ರದಲ್ಲಿರುವ ಈ ದೃಶ್ಯವು ಜನಪ್ರಿಯತೆಯನ್ನು ಹೊಂದುತ್ತಿದೆ.
ಒಟ್ಟಾರೆ, ಇವುಗಳ ಸೂಕ್ಷ್ಮತೆಯನ್ನು ಗಮನಿಸಿ ನೋಡಿದರೆ, ಶಾಂತಿ, ಪ್ರೀತಿ ಹಾಗೂ ಸಂತೋಷದ ಹಾದಿಯನ್ನು ಪ್ರೇರೇಪಿಸುವಂತಿದೆ. ಮೌನದ ಅರಿವು ಹಾಗೂ ಸಹಬಾಳ್ವೆಯನ್ನು ಸಂಕೇತಿಸಿರುವ ಇವುಗಳ ಪಯಣವು ಜೀವನಶೂನ್ಯ(ಸಾವು ನಿಶ್ಚಿತ) ಎನ್ನುವ ದೃಷ್ಟಿಕೋನವನ್ನು ತಿಳಿಯಪಡಿಸುತ್ತದೆ. ಎಲ್ಲವೂ ವಿನಾಶದತ್ತಲೇ ಸಾಗುತ್ತಿರುವಾಗ, ವಿರಸದ ಜೀವನದಿಂದ ಬಳಲದೇ, ಪ್ರತಿ ಕ್ಷಣದ ಮಹತ್ವವನ್ನು ಅನುಭವಿಸಬೇಕಿದೆ. ಇದನ್ನೂ ಓದಿ: ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಪ್ರತಿಷ್ಠಿತ ʻಅಶೋಕ ಚಕ್ರʼಕ್ಕೆ ಭಾಜನರಾದ ಬಾಹ್ಯಾಕಾಶ ತಾರೆ ಶುಭಾಂಶು ಶುಕ್ಲಾ