ಭಾರತದ ಪ್ರತಿಷ್ಠಿತ ಜಾಗತಿಕ ಇಂಧನ ಸಮ್ಮೇಳನ ಇಂಡಿಯಾ ಎನರ್ಜಿ ವೀಕ್ 2026 ಇಂದಿನಿಂದ ಆರಂಭಗೊಂಡಿದೆ. ಇಂಧನ ಸುರಕ್ಷತೆಯನ್ನು ಕೇಂದ್ರೀಕರಿಸುವ ಈ ಪ್ರದರ್ಶನ ಕಾರ್ಯಕ್ರಮವು, ನವೀಕರಿಸಬಹುದಾದ ಇಂಧನ, ಹಸಿರು ಇಂಧನ ಹಾಗೂ ಹಸಿರು ಹೈಡ್ರೋಜನ್ ಸೇರಿದಂತೆ ಸುಸ್ಥಿರ ಭವಿಷ್ಯಕ್ಕಾಗಿ ಜಾಗತಿಕ ಶಕ್ತಿ ಪರಿವರ್ತನೆಗೆ ಸಹಯೋಗದ ವೇದಿಕೆಯಾಗಿದೆ.
ಜನವರಿ 27-30 ರವರೆಗೆ ಗೋವಾದಲ್ಲಿ ಓಎನ್‌ಜಿಸಿ - ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸಮ್ಮುಖದಲ್ಲಿ ಅನೇಕ ದೇಶಗಳ ಪ್ರಮುಖರು, ಪ್ರದರ್ಶಕರು, ಪ್ರತಿನಿಧಿಗಳು ಹಾಗೂ ಜಾಗತಿಕ ಮಟ್ಟದ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ. ಈ ನಡುವೆ ಜಾಗತಿಕ ಇಂಧನ ಕುರಿತ ಚರ್ಚೆಗಳು ನಡೆಯಲಿದೆ. ಎನರ್ಜಿ ವೀಕ್ ಇವೆಂಟ್‌ಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದೆ. ಈ ಬಗ್ಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಂಧನ ವಲಯದಿಂದಾಗಿ 500 ಶತಕೋಟಿ ಡಾಲರ್ ಹೂಡಿಕೆ ಅವಕಾಶ -
ಪ್ರಧಾನಿ ಮೋದಿಯವರು ಇಂಡಿಯಾ ಎನರ್ಜಿ ವೀಕ್ 2026 ರನ್ನು ಉದ್ದೇಶಿಸಿ ಮಾತನಾಡಿದ ವೇಳೆ, “ ಭಾರತದ ಇಂಧನ ವಲಯವು, 500 ಶತಕೋಟಿ ಡಾಲರ್ ಹೂಡಿಕೆ ಅವಕಾಶಗಳನ್ನು ನೀಡುತ್ತಿದೆ. ಶೀಘ್ರದಲ್ಲೇ ಭಾರತ ತೈಲ ಸಂಸ್ಕರಣಾ ಕೇಂದ್ರವಾಗಲಿದೆ. ಜಾಗತಿಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ
ಗಣರಾಜ್ಯೋತ್ಸವ ದಿನದಂದು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಿಂದಾಗಿ ಭಾರತ ಹಾಗೂ ಯುರೋಪಿನ ಜನತೆಗೆ ಪ್ರಮುಖ ಅವಕಾಶಗಳು ಸಿಗಲಿದೆ. ಇದು ಎರಡು ಪ್ರಮುಖ ಆರ್ಥಿಕತೆಗಳ ನಡುವಿನ ಪಾಲುದಾರಿಕೆಯ ಪರಿಪೂರ್ಣ ಉದಾಹರಣೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆ - ಮಹಿಳಾ ಮೀಸಲಾತಿ ಬಗ್ಗೆ ಆಕ್ಷೇಪ; ಮತದಾರರ ಪಟ್ಟಿ ಪರಿಶೀಲನೆ ಚುರುಕು!?