Skip to main content
ವಿಡಿಯೋ
entertainment

ಬೆಂಗಳೂರಿನಲ್ಲಿ ನಡೆಯಲಿದೆ ಭಾರತದ ಅತಿದೊಡ್ಡ ಫಿಟ್‌ನೆಸ್‌ ಹಬ್ಬ - Rugged Rush

By Shravanthi R
ಬೆಂಗಳೂರಿನಲ್ಲಿ ನಡೆಯಲಿದೆ ಭಾರತದ ಅತಿದೊಡ್ಡ ಫಿಟ್‌ನೆಸ್‌ ಹಬ್ಬ - Rugged Rush

ಫಿಟ್‌ನೆಸ್‌ ಹಾಗೂ ಅಡ್ವೆಂಚರಸ್‌ ಆಕ್ಟಿವಿಟಿಯನ್ನು ಎದುರು ನೋಡುತ್ತಿದ್ದೀರಾ, ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ. Rugged Rush ಇದೇ ಫೆಬ್ರವರಿ 8 ರಂದು ಸಿಲಿಕಾನ್‌ ಸಿಟಿಯಲ್ಲಿ ಇದಕ್ಕಾಗಿ ಆಪಾರ್ಚುನಿಟಿ ಮಾಡಿಕೊಟ್ಟಿದೆ.

ಫಿಟ್‌ನೆಸ್‌  ಹಾಗೂ ಅಡ್ವೆಂಚರಸ್‌ ಆಕ್ಟಿವಿಟಿಯನ್ನು ಎದುರು ನೋಡುತ್ತಿದ್ದೀರಾ, ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ. Rugged Rush ಇದೇ ಫೆಬ್ರವರಿ 8 ರಂದು, ಸಿಲಿಕಾನ್‌ ಸಿಟಿಯಲ್ಲಿ ಇದಕ್ಕಾಗಿ ಆಪಾರ್ಚುನಿಟಿ ಮಾಡಿಕೊಟ್ಟಿದೆ. ಭಾರತದಲ್ಲೇ ಅತಿದೊಡ್ಡ ಫಿಟ್‌ನೆಸ್‌ ಹಬ್ಬ ಎಂದು ಕರೆಸಿಕೊಳ್ಳಲಿರುವ ಇದು ಸಾಹಸಮಯ ಕ್ರೀಡೆಗಳ ಮಾತ್ರವಲ್ಲದೇ ಮನರಂಜನೆಗಳ ಸಮ್ಮಿಲನವಾಗಿದೆ. 

ಪ್ರಮುಖ ಆಕರ್ಷಣೆ - 

7 ಕಿಲೋ ಮೀಟರ್‌ಗಳ ಓಟದ ಸ್ಪರ್ಧೆ ವಿನ್ಯಾಸಗೊಂಡಿದ್ದು, ಇದರಲ್ಲಿ 14 ಅಬ್‌ಸ್ಟಕಲ್ಸ್‌ಗಳ ಕಠಿಣ ಹಾದಿಯನ್ನು ಒಳಗೊಂಡಿರುವುದು. ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಅನೇಕ ಹಂತಗಳಲ್ಲಿ ಸವಾಲುಗಳಿರುತ್ತದೆ. ಇದಕ್ಕಾಗಿ ಚಾಲೆಂಜಿಂಗ್‌ ಬಹುಮಾನವನ್ನೂ ಘೋಷಿಸಲಾಗಿದೆ ಎಂದು ತಿಳಿಸಿದೆ. 

ಇದರಲ್ಲಿ ನೋಂದಾಯಿತರಿಗೆ, ಅಧಿಕೃತ ಟಿ-ಶರ್ಟ್ (T-Shirt), ಫಿನಿಶರ್ ಮೆಡಲ್ (Medal), ಬಂಡಾನಾ (Bandana) ಮತ್ತು ಗುಡ್ಡಿ ಬ್ಯಾಗ್ (Goodie Bag), ಫ್ರಿಡ್ಜ್ ಮ್ಯಾಗ್ನೆಟ್ ಮತ್ತು ಸುಮಾರು ₹5,000 ಮೌಲ್ಯದ ವೋಚರ್‌ಗಳ ಉಡುಗೊರೆ ಹಾಗೂ ಸೌಲಭ್ಯಗಳು ಸಿಗಲಿವೆ ಎಂದು ತಿಳಿಸಲಾಗಿದೆ. 

ಇನ್ನಿತರ ಆಕರ್ಷಣೆಗಳು -

ಈ ಇವೆಂಟ್‌ನಲ್ಲಿ ಸಾಹಸ ಕ್ರೀಡೆ ಮಾತ್ರವಲ್ಲದೇ, ಜುಂಬಾ, ಯೋಗ, ಪಿಲೇಟ್ಸ್ ಮತ್ತು ಡ್ಯಾನ್ಸ್ ಫಿಟ್‌ನೆಸ್, ವೆಲ್‌ನೆಸ್ ಬಜಾರ್ ಮತ್ತು ಕಾರ್ನಿವಲ್, ಸಂಗೀತ, ಲೈವ್ ಡಿಜೆ ಮತ್ತು ಸ್ವಾದಿಷ್ಟ ಆಹಾರ ಮಳಿಗೆಗಳು, ಕಾಫಿ ಮತ್ತು ಬಿಯರ್ ಮೌಂಟೇನ್ ಹೀಗೆ ಅನೇಕ ಮನಸೆಳೆವ ಆಕ್ಟಿವಿಟೀಸ್‌ ಇರಲಿವೆ. 

ಪ್ರವೇಶ ಹಾಗೂ ಟಿಕೆಟ್‌ ವಿವರಗಳ ಹೆಚ್ಚಿನ ಮಾಹಿತಿಗಾಗಿ www.ruggedrush.com ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ. ಇದನ್ನೂ ಓದಿ: ಜಿಬಿಎ ಚುನಾವಣಾ ಪೈಪೋಟಿ - ಆಕಾಂಕ್ಷಿಗಳ ಪಟ್ಟಿ ಏರಿಕೆ - 1,800 ಮಂದಿ ಅರ್ಜಿ ಸ್ವೀಕಾರ!?