ಕಾರ್ಮಿಕ ಹಿತ ರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು ಖಂಡಿಸುವುದಾಗಿ ಉಚಿತ ಕಾರ್ಮಿಕ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿರುವ ಇಂಡಿಯಾ ಲೇಬರ್ ಲೈನ್ ತಿಳಿಸಿದೆ.
ನವೆಂಬರ್ 21,2025 ರಂದು ಜಾರಿಗೊಳಿಸಲಾದ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳು, ಕಾರ್ಮಿಕರ ಉದ್ಯೋಗ ಭದ್ರತೆ, ಕೂಲಿ ಹಕ್ಕುಗಳು ಹಾಗು ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳಲಿರುವ, ಕಾರ್ಮಿಕ ವಿರೋಧಿ ನೀತಿಗಳಾಗಿದೆ ಎಂದು ಹಾಗೂ ಇದನ್ನು ಖಂಡಿಸುವುದಾಗಿ ಇಂಡಿಯಾ ಲೇಬರ್ ಲೈನ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. boAt Rockerz 650 Pro (2025 Launch),Touch/Swipe Controls,Dolby Audio,80Hrs Battery,2Mics Enx,Fast Charge,App Support,Dual Pair,Bluetooth Over Ear Headphones,Wireless Headphone with Mic (Starry Night)
ಕಾರ್ಮಿಕ ಕಾನೂನು ಸಂಬಂಧಿತ ವಿವಾದಗಳು, ದೂರುಗಳನ್ನು ಬಗೆಹರಿಸುವಲ್ಲಿ ಇಂಡಿಯಾ ಲೇಬರ್ ಲೈನ್ ಪ್ರಮುಖ ಪಾತ್ರವಹಿಸಿದ್ದು, ಕಾನೂನು ಸಲಹೆ, ಮಧ್ಯಸ್ಥಿಕೆ ಹಾಗೂ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಯ ಮೂಲಕ ಶ್ರಮಿಸುತ್ತಿದೆ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರವು ಕಾರ್ಮಿಕ ಸಂಘಟನೆಗಳು, ನಾಗರೀಕ ಸಮಾಜ ಹಾಗೂ ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಬೇಕೆಂದು ಆಗ್ರಹಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ದ.ಕ - ಮೊದಲ ʻಬೋಟ್ ಆಂಬ್ಯುಲೆನ್ಸ್ʼಗೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಂದ ಚಾಲನೆ