Skip to main content
ವಿಡಿಯೋ
general

ಜಿಬಿಎ ಎಲೆಕ್ಷನ್ - ಮತಪಟ್ಟಿ ತಾಳೆಗೆ ಹೆಚ್ಚಿನ ಸಮಯ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ

By Shravanthi R
ಜಿಬಿಎ ಎಲೆಕ್ಷನ್ - ಮತಪಟ್ಟಿ ತಾಳೆಗೆ ಹೆಚ್ಚಿನ ಸಮಯ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ

ಮುಂಬರಲಿರುವ ನಗರದ ಐದು ಪಾಲಿಕೆಗಳ ಚುನಾವಣೆಗೆ ಹಣಾಹಣಿ ಇನ್ನೇನು ಶುರುವಾಗಬೇಕಿದೆ. ಇನ್ನೊಂದೆಡೆ, ಮತದಾರರ ಪಟ್ಟಿ ತಾಳೆ ವಿಚಾರಣೆ ಕಾರ್ಯ ಸಂಬಂಧ ಸಮಯ ವಿಸ್ತರಣೆಯನ್ನು ಕೋರಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಲಾಗಿದೆ.

ಜಿಬಿಎ ವಾರ್ಡ್‌ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಿರುವ ಕುರಿತು ಆಯೋಗದ ಪರಿಷ್ಕೃತ ಸುತ್ತೋಲೆಯನ್ನು ಗಮನಿಸಿ, ಸಭೆ ನಡೆಸಿದ ಬಳಿಕ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಆಯೋಗವು ಜನವರಿ 19ರಂದು ಪ್ರಕಟಿಸಲಾಗಿದೆ. ಜನವರಿ 22 ರಂದು ಆಯೋಗವು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಅದರಂತೆ, ಆಯಾ ಪಾಲಿಕೆಗಳಲ್ಲಿ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಶಾಸನಬದ್ದ ಕಾರ್ಯ ಪೂರ್ಣಗೊಳಿಸಲು ಸಮಯ ವಿಸ್ತರಣೆ ಮಾಡುವಂತೆ ಕೋರಿ ಆಯೋಗಕ್ಕೆ ಕೂಡಲೇ ಪತ್ರ ಬರೆವಂತೆ ಜಿಬಿಎ ಚುನಾವಣಾ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ. ಅವಧಿ ವಿಸ್ತರಣೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದಲೂ ಮನವಿ ಸಲ್ಲಿಕೆಯಾಗಿದೆ ಎಂದು ವರದಿ ತಿಳಿಸಿದೆ. OnePlus Bullets Wireless Z3 in-Ear Neckband with 12.4mm Drivers, 3D Spatial Audio,10 mins Charge for 27 hrs Playback, 4 EQ preset, Dynamic bass Enhancement & BT5.4

1500 ಮತದಾರರಿಗೊಂದು ಮತಗಟ್ಟೆ - 

ಇದೇ ಸಂದರ್ಭದಲ್ಲಿ, ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್‌ ಅವರು ಮಾತನಾಡಿ, ಗರಿಷ್ಠ 1,500 ಮತದಾರರಿಗೊಂದು ಮತಗಟ್ಟೆ ಇರಬೇಕೆಂದು ಆಯೋಗವು ನಿರ್ದೇಶಿಸಿದೆ. ಅದರನುಗುಣವಾಗಿ ಎಲ್ಲಾ ವಾರ್ಡ್‌ಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ - ಇಂಡಿಯಾ ಲೇಬರ್‌ ಲೈನ್‌