ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಸಚಿವ ಎಚ್.ಕೆ. ಪಾಟೀಲ್ ಅವರು, ದೆಹಲಿಯಿಂದ ಫೋನ್ ಮಾಡಿಸಿ ರಾಜ್ಯಪಾಲರು ಭಾಷಣದ ಅರ್ಧಕ್ಕೆ ಹೋಗುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಕೇಶವ ಕೃಪಾ ಹಾಗೂ ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ ಎಂದು ದನಿಗೂಡಿಸಿದರು.
ನಮ್ಮ ಸರ್ಕಾರ ದೂರವಾಣಿ ಕದ್ದಾಲಿಸಿಲ್ಲ-ಸಿಎಂ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಸಿಲ್ಲ. ಕೇಂದ್ರದಿಂದ ಕರೆ ಬಂದಿರಬಹುದು. ಇದನ್ನು ವಿನಾಕಾರಣ ವಿವಾದ ಮಾಡಲಾಗುತ್ತಿದೆ. ಮೊದಲು ರಾಜ್ಯಪಾಲರ ನಡೆ ಬಗ್ಗೆ ಮಾತನಾಡಿ ಎಂದು ಹೇಳಿದರು.Shining Diva Fashion Stylish Bracelet for Women
ಪ್ರತಿಪಕ್ಷಗಳ ಆಕ್ರೋಶ ಮತ್ತು ಕದ್ದಾಲಿಕೆ ಆರೋಪ:
ಸಚಿವರ ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜಭವನ ಮತ್ತು ದೆಹಲಿಯ ನಡುವೆ ನಡೆದ ಸಂಭಾಷಣೆ ಸಚಿವರಿಗೆ ತಿಳಿಯಲು ಹೇಗೆ ಸಾಧ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು.ಇದನ್ನು ಓದಿ: ದೆಹಲಿಯ ನಾಲ್ಕು ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ: ಇ-ಮೇಲ್ ಮೂಲಕ ಹರಿದುಬಂತು ಮೃತ್ಯು ಸಂದೇಶ!
ಕ್ಷಮೆಗೆ ಪಟ್ಟು: ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಅವರು ಇಂತಹ ಆಧಾರರಹಿತ ಆರೋಪ ಮಾಡಿರುವುದು ಸದನಕ್ಕೆ ಮಾಡಿದ ಅಗೌರವ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.
ದೂರವಾಣಿ ಕದ್ದಾಲಿಕೆಯಿಂದ ಈ ಹಿಂದೆ ಸರ್ಕಾರಗಳೇ ಪತನವಾಗಿವೆ, ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಅಶೋಕ್ ಎಚ್ಚರಿಸಿದರು. ಈ ವೇಳೆ ಬಿಜೆಪಿ ಸದಸ್ಯರಾದ ಬಿ.ವೈ. ವಿಜಯೇಂದ್ರ, ಸುನಿಲ್ ಕುಮಾರ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.ಇದನ್ನು ಓದಿ: ಜಯನಗರ ಜಿದ್ದಾಜಿದ್ದಿ: ರಾಮಮೂರ್ತಿಗೆ ಸುಪ್ರೀಂ ಬ್ರೇಕ್..!
ಗದ್ದಲ ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಕೆ ಮಾಡಿಲ್ಲ. ಕೇಂದ್ರದಿಂದ ರಾಜ್ಯಪಾಲರಿಗೆ ಕರೆ ಬಂದಿರಬಹುದು ಎಂಬುದು ಒಂದು ಊಹೆ ಅಷ್ಟೇ.
ಇದನ್ನು ವಿನಾಕಾರಣ ವಿವಾದ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಪ್ರತಿಪಕ್ಷಗಳು ಮೊದಲು ರಾಜ್ಯಪಾಲರ ನಡವಳಿಕೆಯ ಬಗ್ಗೆ ಚರ್ಚಿಸಲಿ ಎಂದು ತಿರುಗೇಟು ನೀಡಿದರು.ಇದನ್ನು ಓದಿ: ಎಸ್‌ಐಆರ್ ನೋಟಿಸ್ - ನಗರದ ಬಂಗಾಳಿ ವಲಸಿಗರಿಗೆ ತಾಕಿದ ಚುನಾವಣಾ ಬಿಸಿ!?