ಇತ್ತೀಚೆಗೆ, ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಮುಗಿಲು ಮುಟ್ಟುತ್ತಿದೆ. ಹತ್ತಿರತ್ತಿರ ಚಿನ್ನದ ಬೆಲೆ 2 ಲಕ್ಷ ಗಡಿ ಹಾಗೂ ಬೆಳ್ಳಿ ಬೆಲೆಯು 4 ಲಕ್ಷಕ್ಕೆ ತಲುಪುವ ಮುನ್ಸೂಚನೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಖರೀದಿದಾರರಿಗೆ ಆಘಾತವನ್ನುಂಟು ಮಾಡಿದೆ. ಇದೀಗ, ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಅವಲಕ್ಷಣಗಳಿಂದಾಗಿ ಹೂಡಿಕೆದಾರರಿಗೂ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಚಿನ್ನಾಭರಣ, ಬೆಳ್ಳಿ ಬೆಲೆ ವ್ಯತ್ಯಾಸಗೊಂಡಿರುವ ಪರಿಣಾಮ ಹೂಡಿಕೆದಾರರಿಗೆ ಭಾರಿ ನಷ್ಟ ಪರಿಣಮಿಸಿದೆ ಎಂದು ವರದಿಯಾಗಿದ್ದು, ಇದು ಸಾಮಾನ್ಯ ಜನರಲ್ಲೂ ಆತಂಕ ಸೃಷ್ಟಿಸಿದೆ. ಕೈಗೆಟುಕದ ರೀತಿಯಲ್ಲಿ ಆಭರಣ ಪ್ರಿಯರಿಗೆ ಮಾರುಕಟ್ಟೆ ಶಾಕ್ ಕೊಟ್ಟಿದೆ. ಭಾರಿ ಏರಿಳಿತಗಳ ಸುಳಿಯಿಂದಾಗಿ ಗ್ರಾಹಕ ಮತ್ತು ಹೂಡಿಕೆ ವಲಯದಲ್ಲಿ ಸಂಚಲನ ಮೂಡಿಸಿದೆ ಎನ್ನಲಾಗಿದೆ. ನೆನ್ನೆ ಒಂದೇ ದಿವಸಕ್ಕೆ 10,000 ಇಳಿಕೆ ಕಂಡು ಚಿನ್ನ-ಬೆಳ್ಳಿ ಬೆಲೆಗಳು ಕುಸಿತಗೊಂಡವು. Whirlpool 184 L 2 Star Direct-Cool Single Door Refrigerator (205 WDE CLS 2S SAPPHIRE BLUE-Z, Blue)
ಇಂದಿನ ಚಿನ್ನ - ಬೆಳ್ಳಿ ಬೆಲೆ ವಿವರ:(ಪ್ರಸ್ತುತ ಬೆಂಗಳೂರಲ್ಲಿ)
ಲೋಹದ ವಿಧ | ತೂಕ | ಇಂದಿನ ದರ (ಅಂದಾಜು) |
24 ಕ್ಯಾರೆಟ್ ಚಿನ್ನ (ಶುದ್ಧ) | 10 ಗ್ರಾಂ | ₹1,60,580 |
22 ಕ್ಯಾರೆಟ್ ಚಿನ್ನ (ಆಭರಣ) | 10 ಗ್ರಾಂ | ₹1,47,200 |
18 ಕ್ಯಾರೆಟ್ ಚಿನ್ನ (ಆಭರಣ) | 10 ಗ್ರಾಂ | ₹1,20,440 |
ಬೆಳ್ಳಿ (Silver) | 1 ಕೆಜಿ | ₹3,50,000 |
ಈ ರೀತಿ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ದಿಡೀರ್ ಏರಿಕೆಳಿಕೆಗಳ ಬೆಳವಣಿಗೆಯಿಂದ ಗ್ರಾಹಕರು ಹಾಗೂ ಇನ್ವೆಸ್ಟರ್ಸ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸಿಜೆ ರಾಯ್ ಸಾವು: ಕೊನೆಯ 15 ನಿಮಿಷಗಳಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ!?
ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.