ಕನ್ನಡ ಸಾಹಿತ್ಯದಲ್ಲಿ ಹಿರಿಯ ಸ್ಪೂರ್ತಿ ಸೆಲೆಯಂತಿದ್ದಾರೆ ಅಂಬಿಕಾತನಯದತ್ತ ಬಿರುದಾಂಕಿತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಅವರ ಮಾತೃಭಾಷೆ ಮರಾಠಿಯಾಗಿದ್ದರೂ ಕನ್ನಡ ಸಾರಸ್ವತಲೋಕದಲ್ಲಿ ಅವರ ಸಾಹಿತ್ಯ ಕೃಷಿ ಕನ್ನಡವನ್ನು ಶ್ರೀಮಂತಗೊಳಿಸಿದೆ. ಅವರ ಕಾವ್ಯಸೃಷ್ಟಿ, ಭಾಷಾಕೃತಿ ಅವರ ಬದುಕು-ಬರಹವು ಎಲ್ಲಾ ಕಾಲಮಾನಕ್ಕೂ ಚೇತನ ಸ್ವರೂಪಿಯಾಗುವಂತದ್ದು.
ಕುವೆಂಪು ನಂತರ ತಮ್ಮ ಅನನ್ಯ ಸಿದ್ದಾಂತವನ್ನು ಜೀವಿಸಿದ ಬೇಂದ್ರೆಯವರು ಜೀವಿಸಿದ ರೀತಿ, ಬೆರಗನ್ನು ಮೂಡಿಸುತ್ತದೆ. ಅವರು ರಚಿಸಿದ ಕೃತಿಗಳಾಗಲಿ, ಕಾವ್ಯಗಳಾಗಲಿ ಚಿಂತನಾ ಒಳಹುಗಳನ್ನು ಅರ್ಥೈಸಿದ ಬಗೆ ಅಚ್ಚರಿ ಮೂಡಿಸುತ್ತದೆ. ʻನಾಕುತಂತಿʼಯ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠವನ್ನು ಕೊಡಮಾಡಿಸಿದ ಶ್ರೀಯುತರು, ಸಾಹಿತ್ಯಲೋಕದ ನಕ್ಷತ್ರವಾಗಿ ಪ್ರಕಾಶಿಸುತ್ತಿದ್ದಾರೆ. Samsung 183 L, 4 Star, Digital Inverter, Direct-Cool Single Door Refrigerator (RR20C1824CR/HL, Red, Camellia Purple, Base Stand Drawer)
ಅವರು ವಿರಚಿತ ಉಯ್ಯಾಲೆ, ಗರಿ, ಅರಳು-ಮರಳು, ಸಖೀಗೀತ, ಹೃದಯ ಸಮುದ್ರ ಇನ್ನಿತರೆ ಪುಸ್ತಕ ಸಂಪದಗಳು ಅವರನ್ನು ಎಂದಿಗೂ ಜೀವಂತವಾಗಿರಿಸಿದೆ. ಜೀವನದಲ್ಲಿ ಬೆಂದ್ರೆ ಬೇಂದ್ರೆಯಂತಾಗುತ್ತಾರೆ ಎನ್ನುವ ಮಾತು ಎಲ್ಲೋ ಕೇಳಿದಂತೆ ನೆನಪು. ಈ ಮಾತು ಸತ್ಯಸ್ಪರ್ಶಿ ಕೂಡ.
ಸಾಹಿತಿಗಳು ಕಂಡುಂಡ ಜೀವನದ ವೈಶಿಷ್ಟ್ಯಗಳು ಅರ್ಥಗರ್ಭಿತವಾಗಿ ಅವರ ಸಾಹಿತ್ಯಕೃಷಿಯಲ್ಲಿ ಕಂಡುಬರುತ್ತದೆ. ಅವರು ಮುಂದೆ ಸಾಗುತ್ತಾ, ಹಿಂದಿನದೆಲ್ಲವನ್ನು ಕಳಚಿಕೊಳ್ಳುತ್ತಾ, ಭೂತಕ್ಕೆ ಅಂಟಿಕೊಳ್ಳದೆ, ಭವಿಷ್ಯದಲ್ಲಿಯೂ ಆಸಕ್ತರಾಗದೆ, ವರ್ತಮಾನದ ಕ್ಷಣಗಳಿಗಷ್ಟೇ ತೆರೆದುಕೊಂಡು, ಬಾಳುವ ಕವಿದರ್ಶನರಿಗೆ ನಮ್ಯನಮನ. ಇದನ್ನೂ ಓದಿ: ಕುಸಿದ ಚಿನ್ನ-ಬೆಳ್ಳಿ ಬೆಲೆ - ಹೂಡಿಕೆದಾರರಿಗೆ ನಷ್ಟ ಸಂಭವ!?