Skip to main content
ವಿಡಿಯೋ
general

ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಕುಸಿತ - ʻಜಲಕಂಟಕʼ ಕಳವಳವೇ!?

By Shravanthi R
ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಕುಸಿತ - ʻಜಲಕಂಟಕʼ ಕಳವಳವೇ!?

ವರದಿಗಳ ಪ್ರಕಾರ, ಭಾರತವು ವಿಶ್ವದಲ್ಲೇ ಅತಿಹೆಚ್ಚು ಅಂತರ್ಜಲ ಬಳಕೆ ಮಾಡುವ ದೇಶವೆನಿಸಿಕೊಂಡಿದೆ. ಇದರಲ್ಲಿಯೂ ಕರ್ನಾಟಕದ ಹಲವು ಜಿಲ್ಲೆಗಳು, ಪ್ರಮುಖವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳು ʻಅತಿಹೆಚ್ಚು ಶೋಷಿತʼ (Over-exploited) ವಲಯಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಇತ್ತೀಚೆಗೆ ವರದಿಯಾದಂತೆ, ಕರಾವಳಿ ಭಾಗ ಪ್ರದೇಶದ ಪ್ರಮುಖ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಜನವಸತಿ, ಕೃಷಿ-ಅವಲಂಬಿತ ಚಟುವಟಿಕೆಗಳು, ಬೋರ್‌ವೆಲ್‌ ಕೊರೆತದಂತ ಪ್ರಮುಖ ಕಾರಣಗಳಿಂದ ಅಂತರ್ಜಲ ಮಟ್ಟ ಕುಸಿತ ಉಂಟಾಗಿದೆ ಎಂದು ತಿಳಿಸಲಾಗಿದೆ. 

ವರದಿಗಳ ಪ್ರಕಾರ, ಭಾರತವು ವಿಶ್ವದಲ್ಲೇ ಅತಿಹೆಚ್ಚು ಅಂತರ್ಜಲ ಬಳಕೆ ಮಾಡುವ ದೇಶವೆನಿಸಿಕೊಂಡಿದೆ. ಇದರಲ್ಲಿಯೂ ಕರ್ನಾಟಕದ ಹಲವು ಜಿಲ್ಲೆಗಳು, ಪ್ರಮುಖವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳು ʻಅತಿಹೆಚ್ಚು ಶೋಷಿತʼ (Over-exploited) ವಲಯಗಳ ಪಟ್ಟಿಗೆ ಸೇರ್ಪಡೆಯಾಗಿದೆ. 


ಇಲ್ಲಿ ಹೆಚ್ಚಾಗಿ ಅಂತರ್ಜಲ ಮಟ್ಟ ಕುಸಿತ ತೀವ್ರಗೊಂಡಿದ್ದು ಶೇ. 100ಕ್ಕಿಂತಲೂ ಹೆಚ್ಚು ಬಳಕೆಯನ್ನು ದಾಖಲಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ, ಅಧಿಸೂಚಿತ ಪ್ರದೇಶಗಳಲ್ಲಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ನಿಯಂತ್ರಣ) ಕಾಯ್ದೆ, 2011ಯಡಿಯಲ್ಲಿ ಹೆಚ್ಚಿನ ನಿಯಂತ್ರಣದ ಅಗತ್ಯತೆಯನ್ನು ಒತ್ತಿ ಹೇಳಲಾಗುತ್ತದೆ. ಇನ್ನು, ಈ ಕಾಯ್ದೆಯ ತಿದ್ದುಪಡಿ 2025 ಕೂಡ ಅಸ್ತಿತ್ವದಲ್ಲಿದೆ ಎನ್ನಲಾಗಿದೆ. Samsung 236 L, 2 Star, Digital Inverter, Frost Free Double Door Refrigerator (RT28C3032GS/HL, Gray Silver) 

ಈ ದೃಷ್ಟಿಯಿಂದ ಭೂಮಿಯೊಡಲು ಬತ್ತಲು ಬಿಡದಂತೆ ಸಾರ್ವಜನಿಕ ಜಾಗೃತಿಯ ಅಗತ್ಯತೆ ಇಂದಿಗೆ ಹೆಚ್ಚಿದೆ. 

ಎಚ್ಚರಿಕೆಯ ವಾಸ್ತವಾಂಶಗಳು - 

  • ಅನಿಯಂತ್ರಿತ ಕೊಳವೆಬಾವಿಗಳು, ರಾಸಾಯನಿಕ ಮಾಲಿನ್ಯ ಹಾಗೂ ಕಾಂಕ್ರೀಟ್‌ ಕಾಡು ಹೀಗೆ ಆಧುನಿಕ ತೊಡಕುಗಳನ್ನು ಮನಗಂಡು ಎಚ್ಚೆತ್ತುಕೊಳ್ಳುವ ಬಗ್ಗೆ ಅರಿವು

  • ಮಳೆ ನೀರು ಕೊಯ್ಲು, ಕೆರೆಗಳ ಪುನಶ್ಚೇತನ, ಅರಣ್ಯೀಕರಣ ಸೇರಿದಂತೆ ಸಂರಕ್ಷಣೆ, ಮರುಪೂರಣಕ್ಕೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುವುದು

  • ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ, ಸರ್ಕಾರ ಕ್ರಮ ಮತ್ತು ಬಜೆಟ್‌ ಅನುಮೋದನೆಯಂತಹ ಕಾರ್ಯಸೂಚಿ ಹಾಗೂ ತುರ್ತುಕ್ರಮಗಳನ್ನು ನಡೆಸುವುದು.  

  • ಜನಸಾಮಾನ್ಯರಲ್ಲೂ ಜಾಗೃತ ಚಿತ್ರಣ, ಪರಿಸ್ಥಿತಿ ವಾಸ್ತವಾಂಶಗಳನ್ನು ಮನಗಾಣಿಸುವುದು. ಇದನ್ನೂ ಓದಿ: ಯುಗದ ವರಕವಿ ದ.ರಾ ಬೇಂದ್ರೆ 130ನೇ ಹುಟ್ಟುಹಬ್ಬ - ಬದುಕು ಬರಹದ ಬೆಳಕು

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.