ಇದೇ ಫೆಬ್ರವರಿ 7 ಮತ್ತು 8, 2026 ರಂದು ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿತವಾಗಿರುವ 'ಅಂತರಾಷ್ಟ್ರೀಯ ಗಾಳಿಪಟ ಉತ್ಸವ - 2026' ಸಂಭ್ರಮ ಜರುಗಲಿದೆ. ಹುಬ್ಬಳ್ಳಿಯ ಬಾನಂಗಳದಲ್ಲಿ ವರ್ಣರಂಜಿತ ಗಾಳಿಪಟಗಳ ಕಲರವವಿರಲಿದೆ. ಈ ಹಿನ್ನಲೆಯಲ್ಲಿ, ಜನವರಿ 30 ರಂದು 'ಅಂತರಾಷ್ಟ್ರೀಯ ಗಾಳಿಪಟ ಉತ್ಸವ - 2026' ರ ಅಧಿಕೃತ ಲೋಗೋ ಹಾಗೂ ಪೋಸ್ಟರ್ ಅನಾವರಣದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಭಾಗವಹಿಸಿದರು.
ಈ ಸಂದರ್ಭದಲ್ಲಿ, ಮಾತನಾಡಿದ ಅವರು, ಗುಜರಾತ್, ಗೋವಾ, ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದ ಗಾಳಿಪಟ ಅಂತರಾಷ್ಟ್ರೀಯ ಉತ್ಸವವನ್ನು ನಗರದಲ್ಲಿ 7 ನೇ ಬಾರಿಗೆ ಏರ್ಪಡಿಸುವ ಮೂಲಕ ಈ ಭಾಗಕ್ಕೂ ಗಾಳಿಪಟ ಉತ್ಸವವನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಈ ಉತ್ಸವದಲ್ಲಿ ದೇಶದ ಪ್ರಸಿದ್ದ ಗಾಳಿಪಟ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಎರಡು ದಿನಗಳ ಈ ಉತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ. Haier 237L 3 Star Frost Free Bottom Mount Double Door Refrigerator|8 In 1 Convertible Modes|Jhukna Mat-Bottom Freezer|Twin Inverter|200% Faster Ice Making in 49 Minutes (HEB-243GS-P, Moon Silver)
ಇದರೊಟ್ಟಿಗೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸೋನು ನಿಗಂ, ಜಸ್ಕರನ್ ಸಿಂಗ್, ಗಾನಕೋಗಿಲೆ ಖ್ಯಾತಿಯ ಮಹನ್ಯ ಪಾಟೀಲ, ದಿವ್ಯಾ ರಾಮಚಂದ್ರ ತಂಡ ಹಾಗೂ ಸಂಗೀತ ಸಂಯೋಜಕ ನಕುಲ್ ಅಭಯಂಕರ್ ಸಂಗೀತ ತಂಡಗಳಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಜೊತೆಗೆ, ದೇಶಿ ಕ್ರೀಡೆಗಳಾದ ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ-ಜಗ್ಗಾಟ, ಚಿನ್ನಿ-ದಾಂಡು, ರಂಗೋಲಿ ಸ್ಪರ್ಧೆಯನ್ನೂ ಸಹ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಕುಸಿತ - ʻಜಲಕಂಟಕʼ ಕಳವಳವೇ!?