Skip to main content
ವಿಡಿಯೋ
globalnews

ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿರುವುದಕ್ಕೆ ನಾಚಿಕೆಯಿಂದ ತಲೆಬಾಗುತ್ತೇವೆ - ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌

By Shravanthi R
ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿರುವುದಕ್ಕೆ ನಾಚಿಕೆಯಿಂದ ತಲೆಬಾಗುತ್ತೇವೆ - ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌

ನಾವು ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿದ್ದೇವೆ. ಸಾಲಕ್ಕಾಗಿ ಕೈಚಾಚುತ್ತಿರುವುದಕ್ಕೆ ನಮಗೆ ನಾಚಿಕೆಯಿಂದ ತಲೆಬಾಗುವಂತಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿಕೆ ನೀಡಿದ್ದಾರೆ.

ನಾವು ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿದ್ದೇವೆ. ಸಾಲಕ್ಕಾಗಿ ಕೈಚಾಚುತ್ತಿರುವುದಕ್ಕೆ ನಮಗೆ ನಾಚಿಕೆಯಿಂದ ತಲೆಬಾಗುವಂತಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ ಮಾತನಾಡಿದ್ದಾರೆ. ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಕುರಿತ ಕಳವಳ ವ್ಯಕ್ತಪಡಿಸಿರುವ ಅವರು, ದೇಶದ ಉಳಿಕೆಗಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಹಾಗೂ ಇತರೆ ದೇಶಗಳ ಮೊರೆಹೋಗಿರುವ ಬಗ್ಗೆ ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಉನ್ನತ ರಫ್ತುದಾರರನ್ನುದ್ದೇಶಿಸಿ ಮಾತನಾಡಿರುವ ಅವರು, ಆರ್ಥಿಕ ಸಹಾಯಕ್ಕಾಗಿ ದೇಶಗಳಿಗೆ ಪ್ರಯಾಣಿಸಿಬೇಕಾಯಿತು ಎಂಬ ಪರಿಸ್ಥಿತಿಯನ್ನು ವಿವರಿಸಿದರು. ದೇಶದಲ್ಲಿ ಹಣದುಬ್ಬರ ಗಗನಕ್ಕೇರಿದ್ದು, ವಿದ್ಯುತ್‌ ದರ, ಪೆಟ್ರೋಲ್‌ ದರ ಹಾಗೂ ದಿನಬಳಕೆ ವಸ್ತುಗಳ ಬೆಲೆಗಳು ಜನಸಾಮಾನ್ಯರ ಕೈಗೆಟುಕದಂತಾಗಿದೆ. LG Smart Choice, 380 L, 3 Star, Frost-Free Smart Inverter Double Door Refrigerator (GL-S412SPZX, Shiny Steel, Convertible with Express Freeze)

ದಶಕಗಳಿಂದಲೂ ವಿದೇಶಿ ಸಾಲಗಳ ಮೇಲೆ ಅವಲಂಬಿತವಾಗಿರುವ ಪಾಕಿಸ್ತಾನವು, ಸಾಲದ ಸುಳಿಯಲ್ಲಿ ಸಿಲುಕಿದೆ. ಸಂಕಷ್ಟದಲ್ಲಿ ಅಲ್ಲಿನ ಜನರು, ಭವಿಷ್ಯದ ಆತಂಕವನ್ನು ಎದುರಿಸುವಂತಾಗಿದೆ. ಐಎಂಎಫ್‌ನ ಸಾಲದ ಕಠಿಣ ಷರತ್ತುಗಳ ನಡುವಲ್ಲಿಯೂ ಆರ್ಥಿಕ ಸುಧಾರಣೆಯನ್ನು ನಿರೀಕ್ಷಿಸುತ್ತಿದೆ. ಆರ್ಥಿಕ ದಿವಾಳೀತನದ ಗಂಭೀರತೆಯ ಪರಿಣಾಮವಾಗಿ ಇದೀಗ ಪ್ರಧಾನಿಯವರ ಈ ಹೇಳಿಕೆ ಪಾಕಿಸ್ತಾನದ ಬಿಕ್ಕಟ್ಟನ್ನು ಬಯಲು ಮಾಡಿದೆ. ಸಾಲದ ಹೊರತು, ಅನ್ಯಮಾರ್ಗವಿಲ್ಲದಂತಾಗಿರುವುದು ದೇಶದ ಅತಿದೊಡ್ಡ ವೈಫಲ್ಯವೆಂದು ಒಪ್ಪಿಕೊಂಡಂತಾಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2026 - ಹುಬ್ಬಳ್ಳಿಯ ಆಕಾಶದಲ್ಲಿ ಗಾಳಿಪಟ ಸಂಭ್ರಮ - ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ