ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ದಾಖಲೆಯ 9ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಾಡುವ ಮೂಲಕ ಮೊರಾರ್ಜಿ ದೇಸಾಯಿ(10 ಬಾರಿ) ಅವರ ನಂತರ ಈ ಸಾಧನೆಗೆ ಅವರು ಹತ್ತಿರಾಗುತ್ತಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಚಾರಿತ್ರಿಕ ಆಯ-ವ್ಯಯ ಡಿಜಿಟಲ್ ಪತ್ರಪ್ರತಿಯನ್ನು ಅವರು ಮಂಡಿಸಲಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಅವರು ಮೊಸರು-ಸಕ್ಕರೆ ತಿನ್ನಿಸಿ ಶುಭ ಕೋರಿದ್ದಾರೆ. ಕರ್ತವ್ಯ ಭವನದ ಹೊರಗೆ ತಮ್ಮ ತಂಡದೊಂದಿಗೆ ಟ್ಯಾಬ್ಲೆಟ್ ಪ್ರದರ್ಶಿಸಿದ್ದಾರೆ. P Lankesh Samagra kathegalu ಪಿ. ಲಂಕೇಶ್ ಸಮಗ್ರ ಕಥೆಗಳು Perfect Paperback – 1 January 2023
ಈ ಮಧ್ಯೆ, ಪ್ರತಿ ಬಾರಿಯಂತೆ ಈ ಬಾರಿಯು ಅವರ ಸೀರೆ ಟ್ರೆಂಡ್ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿದೆ ಎನ್ನಲಾಗಿದೆ. ತಮಿಳುನಾಡಿನ ನೇಯ್ಗೆ ಪರಂಪರೆಯನ್ನು ಗೌರವಿಸುವ ಸಲುವಾಗಿ ಕೈಮಗ್ಗದಿಂದ ತಯಾರಿಸಿದ ಕಾಂಜೀವರಂ ರೇಷ್ಮೆಸೀರೆಯನ್ನು ಧರಿಸಿದ್ದಾರೆ. ಇದನ್ನೂ ಓದಿ: ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿರುವುದಕ್ಕೆ ನಾಚಿಕೆಯಿಂದ ತಲೆಬಾಗುತ್ತೇವೆ - ಪಾಕ್ ಪ್ರಧಾನಿ ಶಹಬಾಜ್ ಷರೀಫ್