Skip to main content
ವಿಡಿಯೋ
general

Union Budget 2026 - ವ್ಯಾಪಾರ ನೋಟ ಹೇಗಿರಲಿದೆ?

By Shravanthi R
Union Budget 2026 - ವ್ಯಾಪಾರ ನೋಟ ಹೇಗಿರಲಿದೆ?

ಬಹುಮುಖ್ಯವಾಗಿ ವ್ಯಾಪಾರ ವಲಯದಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ ಎನ್ನಲಾಗಿದೆ. ಇದು ಮುಖ್ಯವಾಗಿ ಪ್ರಸ್ತಕ ವ್ಯಾಪಾರ ಸುಲಭೀಕರಣದ ಮೇಲೆ ಕಣ್ಣು ಹಾಯಿಸಿದ್ದು, ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಆದ್ಯತೆ ದೊರಯುವಲ್ಲಿ ಹೆಚ್ಚಿದ ನಿರೀಕ್ಷೆಯಿದೆ ಎನ್ನಲಾಗಿದೆ.

ಇಂದು ಮಂಡಿಸಲಿರುವ 2026-27 ನೇ ಸಾಲಿನ ಕೇಂದ್ರ ಬಜೆಟ್‌ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಬಹುಮುಖ್ಯವಾಗಿ ವ್ಯಾಪಾರ ವಲಯದಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ ಎನ್ನಲಾಗಿದೆ. ಇದು ಮುಖ್ಯವಾಗಿ ಪ್ರಸ್ತಕ ವ್ಯಾಪಾರ ಸುಲಭೀಕರಣದ ಮೇಲೆ ಕಣ್ಣು ಹಾಯಿಸಿದ್ದು, ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಆದ್ಯತೆ ದೊರಯುವಲ್ಲಿ ಹೆಚ್ಚಿದ ನಿರೀಕ್ಷೆಯಿದೆ ಎನ್ನಲಾಗಿದೆ. 

ವ್ಯಾಪಾರ ದೃಷ್ಟಿಕೋನದಿಂದ ಪ್ರಭಾವಿತವಾಗಲಿರುವ ಪ್ರಮುಖಾಂಶಗಳೆಂದರೆ:

  • MSME ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ - ಡಿಜಿಟಲ್‌ ವಹಿವಾಟಿಗೆ ಬೆಂಬಲ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ವಿನಾಯಿತಿ ಮತ್ತದರ ಉನ್ನತೀಕರಣಕ್ಕೆ ಆದ್ಯತೆ

  • ಕ್ಯಾಪೆಕ್ಸ್‌ - ಕ್ಯಾಪಿಟಲ್‌ ಎಕ್ಸ್‌ಪೆಂಡೀಚರ್‌ ಮತ್ತು ಬಂಡವಾಳ ಹೂಡಿಕೆ ಅಂಶ - ವಿಕಸಿತ ಭಾರತ 2.0 ದ ಕನಸಿನಂತೆ ಮಲ್ಟಿಮೋಡೆಡ್‌ ಟ್ರಾನ್ಸ್‌ಪೋರ್ಟ್‌  ಹಬ್‌ ಗೆ ಒತ್ತು ನೀಡುವುದು, ಮೂಲಸೌಕರ್ಯ (Capital)ವಲಯಕ್ಕೆ ಅನುದಾನ ಮತ್ತು ನಿರ್ಮಾಣ ನಿರೀಕ್ಷೆ

  • ರಫ್ತು ಮತ್ತು ಉತ್ಪಾದನಾ ವಲಯ - ಪಿಐಎಲ್‌ ಪ್ರೊಡಕ್ಷನ್‌ ಲಿಂಕ್ಡ್‌ ಇನ್‌ಸೆಂಟೀವ್‌  ಯೋಜನೆ ಗ್ರೀನ್‌ ಎನರ್ಜಿ ಹಾಗೂ ರಫ್ತು ಸುಂಕ ಕಡಿತದ ಕುರಿತ ಗಮನಾರ್ಹ ನೆರವು ನಿರೀಕ್ಷೆ.

  • ಇನ್ನುಳಿದಂತೆ, ವಲಯವಾರು ಹಿತಾಸಕ್ತ ಪಟ್ಟಿಗಳು ಬಜೆಟ್‌ನ ಸಕಾರಾತ್ಮಕ ಸ್ಪಂದನೆ ಲಕ್ಷಣಗಳಿವೆಂಬ ಮಾಹಿತಿ ಇದೆ ಎನ್ನಲಾಗಿದೆ. 

ಭಾರತದ ಪ್ರಸ್ತುತ ವ್ಯಾಪಾರ ಒಪ್ಪಂದಗಳು, ಮದರ್‌ ಆಫ್‌ ಆಲ್‌ ಡೀಲ್ಸ್‌ ಸೇರಿದಂತೆ, ಎಲ್ಲಾ ಕ್ಷೇತ್ರಗಳಲ್ಲೂ ಬಹುನಿರೀಕ್ಷಿತ ಫಲಿತಾಂಶಗಳನ್ನು ಗಟ್ಟಿಗೊಳಿಸಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಕೇಂದ್ರ ಬಜೆಟ್‌ 2026 - ರಾಷ್ಟ್ರಪತಿಯನ್ನು ಭೇಟಿ ಮಾಡಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌