Skip to main content
ವಿಡಿಯೋ
general

ಕೇಂದ್ರ ಬಜೆಟ್‌ 2026 - ಕರ್ನಾಟಕ ಕರಾವಳಿಗೆ ಬಲ - ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒಲವು

By Shravanthi R
ಕೇಂದ್ರ ಬಜೆಟ್‌ 2026 - ಕರ್ನಾಟಕ ಕರಾವಳಿಗೆ ಬಲ - ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒಲವು

ಬ್ಲೂ ಎಕಾನಮಿ ಭಾಗವಾಗಿ ರಾಜ್ಯದ ಪ್ರವಾಸೋದ್ಯಮ ಹಾಗೂ ಆಧುನಿಕ ಮೂಲಸೌಕರ್ಯದ ಕುರಿತಾಗಿ ಒತ್ತಿ ಹೇಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಡಲತೀರಗಳು ಈಗಾಗಲೇ ಆಲಿವ್ ರಿಡ್ಲಿ (Olive Ridley) ಆಮೆಗಳ ಗೂಡುಕಟ್ಟುವಿಕೆಗೆ ಹೆಸರುವಾಸಿಯಾಗಿವೆ.

ಕರ್ನಾಟಕದ ಸುದೀರ್ಘ 320 ಕಿ.ಮೀ ಕರಾವಳಿ ಸೇರಿದಂತೆ ಪರಿಸರ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ಹೊಸ ಆಯಾಮ ಕೊಟ್ಟಿದೆ ಎನ್ನಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ʻಆಮೆ ಗೂಡು ಕಟ್ಟುವ ತಾಣʼ ಅಭಿವೃದ್ದಿಪಡಿಸುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. 

ಕರಾವಳಿ ಜಿಲ್ಲೆಗಳ ಅಭಿವೃದ್ದಿ ಸೇರಿದಂತೆ, ಸಮುದ್ರದ ಆಮೆಗಳು ಗೂಡುಕಟ್ಟುವ ನೈಸರ್ಗಿಕ ಪರಿಸರಕ್ಕೆ ಧಕ್ಕೆ ಬಾರದಂತೆ ಪ್ರವಾಸಿಗರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲು ಮುಂದಾಗಿದೆ. ಕಡಲ ವೈವಿಧ್ಯ ಸಂರಕ್ಷಣೆ ಭಾಗವಾಗಿ ಆಮೆ ಗೂಡು ಕಟ್ಟುವ ಕೇಂದ್ರ, ಹೋಂ ಸ್ಟೇ ಸಬ್ಸಿಡಿ ಹಾಗೂ ಮೂಲಸೌಕರ್ಯ ಅಭಿವೃದ್ದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉತ್ತೇಜಿತ ಮಾರ್ಗಸೂಚಿಯು ಶೀರ್ಘದಲ್ಲೇ  ಹೊರಬೀಳಲಿದೆ ಎನ್ನಲಾಗಿದೆ. Lankeshshara 2 Naatakagalu (Theregalu-Nanna Thangigondhu Gandu Kodi): Collection of Drama Paperback

ಈ ನಿಟ್ಟಿನಲ್ಲಿ, ಬ್ಲೂ ಎಕಾನಮಿ ಭಾಗವಾಗಿ ರಾಜ್ಯದ ಪ್ರವಾಸೋದ್ಯಮ ಹಾಗೂ ಆಧುನಿಕ ಮೂಲಸೌಕರ್ಯದ ಕುರಿತಾಗಿ ಒತ್ತಿ ಹೇಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಡಲತೀರಗಳು ಈಗಾಗಲೇ ಆಲಿವ್ ರಿಡ್ಲಿ (Olive Ridley) ಆಮೆಗಳ ಗೂಡುಕಟ್ಟುವಿಕೆಗೆ ಹೆಸರುವಾಸಿಯಾಗಿವೆ. ಇದನ್ನೂ ಓದಿ: ಕೇಂದ್ರ ಬಜೆಟ್‌ 2026-27 ಅಪ್‌ಡೇಟ್ಸ್‌ - ಪ್ರಮುಖಾಂಶಗಳಿವು