ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27 ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳ ಅನುದಾನಗಳ ವಿವರಿಸಿದ್ದಾರೆ. ಸುಮಾರು ಒಂದು ಗಂಟೆ 25 ನಿಮಿಷಗಳ ಕಾಲ ಬಜೆಟ್‌ನ್ನು ಮಂಡಿಸಿದ ಅವರು ಇದರ ಪ್ರಮುಖಾಂಶಗಳನ್ನು ಮನಗಾಣಿಸಿದ್ದಾರೆ.
ಕೆಳಕಂಡ ನಾಲ್ಕು ಇಂಜಿನ್ ಎಂದರೆ, ಮಾದರಿಗಳಾಗಿ ವಿಂಗಡಿಸಿ, ಬಜೆಟ್ ಮುನ್ನುಡಿ ಬರೆಯಲಾಗಿದೆ.
ಕೃಷಿ ಮೊದಲ ಇಂಜಿನ್ - ಗ್ರಾಮೀಣ ಸಮೃದ್ದತೆಯ ಉದ್ದೇಶದಿಂದ ಕೃಷಿ ವಲಯವನ್ನು ಬಲಗೊಳಿಸುವಲ್ಲಿ ಕ್ರಮಗಳನ್ನು ಕೈಗೊಳ್ಳುವುದು.
ಎಂಎಸ್‌ಎಂಇ ದ್ವಿತೀಯ ಇಂಜಿನ್ - ಉದ್ಯೋಗ ಮತ್ತು ಉದ್ಯಮ ಪ್ರೋತ್ಸಾಹಿತ ಉದ್ದೇಶವಾಗಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವುದು.
ಹೂಡಿಕೆ ಮೂರನೇ ಇಂಜಿನ್ - ಕ್ಯಾಪೆಕ್ಸ್ (Capital Expenditure) ಹಾಗೂ ಖಾಸಗಿ ಹೂಡಿಕೆ ಆಹ್ವಾನ ಕೇಂದ್ರಿತ ವಿಕಸಿತ ಭಾರತ 2.0ಕ್ಕೆ ಎಂಜಿನ್ ಗುರಿ ಹೊಂದಿದೆ.
ಎಕ್ಸ್‌ಪೋರ್ಟ್ಸ್ ನಾಲ್ಕನೇ ಇಂಜಿನ್ - ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುವ ಭಾರತಕ್ಕೆ ಮೇಕ್ ಇನ್ ಇಂಡಿಯಾದ ಉದ್ದೇಶಿತ ರಫ್ತು ಉದ್ದೇಶಿತ ಮಿಷನ್, ತೆರಿಗೆ ರಿಯಾಯಿತಿ ಹಾಗೂ ಜಾಗತಿಕ ಬ್ರ್ಯಾಂಡಿಂಗ್‌ಗೆ ಅವಕಾಶ ಕಲ್ಪಿಸುವುದು.
ಈ ಬಾರಿ ಬಜೆಟ್‌ನಲ್ಲಿ,
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿರುವುದು.
ಆರ್ಥಿಕ ಸುಸ್ಥಿರತೆ, ಅಭಿವೃದ್ದಿಗೆ ಹೆಚ್ಚಿನ ಒಲವು ತೋರುವ ಯೋಜನೆಗಳ ಘೋಷಣೆ
7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ ಹಾಗೂ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ
ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ 4.4% ರಷ್ಟಿರಲಿದೆ.
ಹೊಸ ತೆರಿಗೆ ಪದ್ದತಿ ಏಪ್ರಿಲ್ 1, 2026 ರಿಂದ ಜಾರಿ
ಮೋಟಾರ್ ಆಕ್ಸಿಡೆಂಟ್ ಕ್ಲೈಮುಗಳಿಗೆ ತೆರಿಗೆ ಇರದು.
ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.43 ಕೋಟಿ
ದಿವ್ಯಾಂಜನ್ ಯೋಜನೆ ಪ್ರಸ್ತಾಪ
ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚಕ್ಕೆ 12.12 ಕೋಟಿ ಖರ್ಚು
ಪ್ರಸ್ತುತ ಸ್ಲಾಬ್ ರೇಟ್ಸ್
Income | Slab Rate |
0-4 lakh rupees | Nil |
4-8 lakh rupees | 5 % |
8-12 lakh rupees | 10 % |
12-16 lakh rupees | 15 % |
16-20 lakh rupees | 20 % |
20- 24 lakh rupees | 25 % |
Above 24 lakh rupees | 30 % |
ಯಾವುದು ಅಗ್ಗ, ಯಾವುದು ದುಬಾರಿ?
ತಂಬಾಕು ಉತ್ಪನ್ನಗಳು, ಮದ್ಯದ ಬೆಲೆ, ಐಷಾರಾಮಿ ಕೈಗಡಿಯಾರಗಳು, ವಿದೇಶದಿಂದ ಆಮದು ಮಾಡಿಕೊಂಡ ಮದ್ಯ, ವಿಮಾನದ ಬಿಡಿ ಭಾಗಗಳು ದುಬಾರಿಯಾಗಲಿದೆ ಎಂದು ತಿಳಿಸಿದೆ.
ಅಗತ್ಯ ಔಷಧಿಗಳು, ಮೊಬೈಲ್ ಫೋನುಗಳು, ಇವಿ ಬ್ಯಾಟರಿಗಳು, ಚರ್ಮದ ಉತ್ಪನ್ನಗಳು ಹಾಗು ಉಡುಪಗಳು, ಸಮುದ್ರ ಉತ್ಪನ್ನಗಳು, ಕ್ರೀಡಾ ಉಪಕರಣಗಳು ಅಗ್ಗವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೇಂದ್ರ ಬಜೆಟ್ 2026 - ಕರ್ನಾಟಕ ಕರಾವಳಿಗೆ ಬಲ - ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒಲವು