Skip to main content
ವಿಡಿಯೋ
general

ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನ ಕೊಡುಗೆಯೇನು - ರಾಜಕೀಯ ನಾಯಕರು ಏನಂದರು!?

By Shravanthi R
ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನ ಕೊಡುಗೆಯೇನು - ರಾಜಕೀಯ ನಾಯಕರು ಏನಂದರು!?

ಈ ಬಾರಿಯ ಕೇಂದ್ರದ ಬಜೆಟ್‌ಅನ್ನು ನಿರ್ಮಲಾ ಸೀತಾರಾಮನ್‌ ಪ್ರಸ್ತುತ ಪಡಿಸಿದ್ದಾರೆ. ಹಣಕಾಸು ಸಚಿವೆಯಾಗಿ 9ನೇ ಬಾರಿ ಅವರು ಮಂಡಿಸಿದ ಬಜೆಟ್‌ ಕುರಿತಾಗಿ ರಾಜಕೀಯ ನಾಯಕರು, ತಜ್ಞರು, ವಿಶ್ಲೇಷಕರ ಹಲವು ಪ್ರತಿಕ್ರಿಯೆಗಳು ಕೇಳಿಬಂದಿದೆ. ಈ ಬಾರಿಯ ಒಟ್ಟು ಬಜೆಟ್‌ ಗಾತ್ರ 53.47 ಲಕ್ಷ ಕೋಟಿ. ಇದೇ ಮೊದಲ ಬಾರಿ 50 ಲಕ್ಷ ಕೋಟಿ ದಾಟಿದ ಬಜೆಟ್‌ ಎಂದು ದಾಖಲಾಗಿದೆ.

ಈ ಬಾರಿಯ ಕೇಂದ್ರದ ಬಜೆಟ್‌ಅನ್ನು ನಿರ್ಮಲಾ ಸೀತಾರಾಮನ್‌ ಪ್ರಸ್ತುತ ಪಡಿಸಿದ್ದಾರೆ. ಹಣಕಾಸು ಸಚಿವೆಯಾಗಿ 9ನೇ ಬಾರಿ ಅವರು ಮಂಡಿಸಿದ ಬಜೆಟ್‌ ಕುರಿತಾಗಿ ರಾಜಕೀಯ ನಾಯಕರು, ತಜ್ಞರು, ವಿಶ್ಲೇಷಕರು ಹಲವು ಪ್ರತಿಕ್ರಿಯೆಗಳು ಕೇಳಿಬಂದಿದೆ. ಈ ಬಾರಿಯ ಒಟ್ಟು ಬಜೆಟ್‌ ಗಾತ್ರ 53.47 ಲಕ್ಷ ಕೋಟಿ. ಇದೇ ಮೊದಲ ಬಾರಿ 50 ಲಕ್ಷ ಕೋಟಿ ದಾಟಿದ ಬಜೆಟ್‌ ಎಂದು ದಾಖಲಾಗಿದೆ. 

ಇದೊಂದು ದೂರದೃಷ್ಟಿಯಿಲ್ಲದ ನಿರಾಶಾದಾಯಕ ಬಜೆಟ್‌. ಇದೊಂದು ಮಾತಿನ ಬಜೆಟ್‌ ಆಗಿದ್ದು, ವಿಕಸಿತ ಭಾರತದ ಪ್ರಸ್ತಾಪವಿದೆ ಅದನ್ನು ಕೃತಿಗಿಳಿಸುವ ಯೋಜನೆಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟೀಕಿಸಿದ್ದಾರೆ. 

ಎಂಎಸ್‌ಎಂಇ ಕ್ಷೇತ್ರದಲ್ಲಿ ಉತ್ತೇಜಕ ಪಾತ್ರವಹಿಸಿಲಿದ್ದು, ಉತ್ಪಾದನಾ ಕ್ಷೇತ್ರದಲ್ಲಿ ನಮ್ಮ ಸ್ಥಾನವನ್ನು ಬಲಪಡಿಸುವಲ್ಲಿ, ಸ್ವಾವಲಂಬನೆ ಸಾಧಿಸಲು ಇದು ಪೂರಕವಾದ ಬಜೆಟ್‌ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿಳಿಸಿದ್ದಾರೆ. Hulimavana Mara - Auto Biography of P Lankesh Perfect Paperback – 1 January 2023

ವಿಕಸಿತ ಭಾರತದ ಸಾಕಾರಕ್ಕೆ ಇದು ಪೂರಕವಾದ ಬಜೆಟ್‌ ಆಗಿದೆ. ರೈಲು ಕಾರಿಡಾರ್‌ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್‌ನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದಾರೆ. ಎಲ್ಲಾ ವಲಯಗಳಲ್ಲೂ ಜನರ ಆಶೋತ್ತರಗಳ ಈಡೇರಿಕೆಗೆ ಹಾಗೂ ಎಲ್ಲರ ವಿಕಾಸದ ಅಂಶಗಳಿಗೆ ಒತ್ತು ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್‌ 2026: ನಾಲ್ಕು ಪ್ರಮುಖ ಇಂಜಿನ್‌ ತಂತ್ರಗಳ ಹೈಲೈಟ್ಸ್‌ - ಇಲ್ಲಿದೆ ಮಾಹಿತಿ

ರಾಜ್ಯ ರೈಲ್ವೇ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮಾತನಾಡಿ, ದೇಶದಲ್ಲಿನ ರೈಲ್ವೇ ಸಂಪರ್ಕ ಹೆಚ್ಚಳ ದೃಷ್ಟಿಯಿಂದ ಭಾರತಾದಾದ್ಯಂತ ಸಂಪರ್ಕವನ್ನು ಬಲಪಡಿಸಲು ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಿಸಿದ್ದಾರೆ. ಇದರ ವಿನ್ಯಾಸವು ಜನಸಮೂಹ, ತಂತ್ರಜ್ಞಾನ ಕೇಂದ್ರಗಳನ್ನು ಉತ್ಪಾದನಾ ಕೇಂದ್ರಗಳು ಸಂಪರ್ಕಿಸುತ್ತದೆ ಎಂದಿದ್ದಾರೆ.

ಆಕರ್ಷಕ ಘೋಷಣೆಗಳ ಬಜೆಟ್‌ ಇದಾಗಿದ್ದು, ಬೆಲೆ ಏರಿಕೆಯನ್ನು ತಹಬದಿಗೆ ತರುವ, ರೂಪಾಯಿ ಅಪಮೌಲ್ಯ ತಡೆಗಟ್ಟುವ ಉದ್ಯೋಗ ಸೃಷ್ಟಿಯ ಯಾವ ಮುನ್ನೋಟಗಳೂ ಬಜೆಟ್‌ನಲ್ಲಿ ಇಲ್ಲದಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟೀಕಿಸಿದ್ದಾರೆ.

ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ ಮಾಡಿರುವುದು ಸ್ವಾಗತಾರ್ಹ ಆದರೆ, ಇದರಿಂದ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನವಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಅವರು ತಿಳಿಸಿದ್ದಾರೆ. 

ಈ ಬೆನ್ನಲ್ಲೇ ಕರ್ನಾಟಕದ ಪಾಲಿಗೆ ಬಜೆಟ್ನಲ್ಲಿ ದೊರಕಿದ್ದೆಷ್ಟು ಎಂದು ನೋಡುವುದಾದರೆ, ಹೈಸ್ಪೀಡ್‌ ರೈಲು ಕಾರಿಡಾರ್‌, ಕಡಲಾಮೆ ಮಾರ್ಗಗಳು, ಗಂಧದ ಮರಗಳ ಪುನರುಜ್ಜೀವನ ಯೋಜನೆ, ಕೋಕೊ ಮತ್ತು ತೆಂಗು ಬೆಳೆಗಾರರಿಗೆ ವಿಶೇಷ ಯೋಜನೆ, ಕರಾವಳಿ ಪ್ರದೇಶಗಳಲ್ಲಿ ಪರ್ವತಾರೋಹಣ, ಸೇರಿದಂತೆ ಹಲವು ಈಡೇರದ ನಿರೀಕ್ಷೆಗಳು ಸೇರಿಕೊಂಡಿವೆ ಎನ್ನಲಾಗಿದೆ. 

ಕೃಷ್ಣಾ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ, 16ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ, ಬೆಂಗಳೂರು ಅಭಿವೃದ್ದಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್‌, ಕರ್ನಾಟಕದ ದೀರ್ಘಕಾಲದ ಬೇಡಿಕೆಯಾದ ರಾಯಚೂರು ಎಐಐಎಂಎಸ್‌, ಆಶಾಕಾರ್ಯಕರ್ತೆಯರ ಗೌರವಧನ ಹೆಚ್ಚಳ ಹೀಗೆ ಅನೇಕ ನಿರೀಕ್ಷೆಗಳು ಬಗೆಹರಿಯದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಜೆಟ್ 2026: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಪಟ್ಟಿ!