Skip to main content
ವಿಡಿಯೋ
1/2
politics

ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಬ್ರೇಕ್: ಸಹಿ ನಿರಾಕರಿಸಲು ಥಾವರ್ ಚಂದ್ ಗೆಹ್ಲೋಟ್..!

By Sushmitha R
ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಬ್ರೇಕ್: ಸಹಿ ನಿರಾಕರಿಸಲು ಥಾವರ್ ಚಂದ್ ಗೆಹ್ಲೋಟ್..!

ಕರ್ನಾಟಕ ಸರ್ಕಾರ ಮಂಡಿಸಿದ್ದ 'ದ್ವೇಷ ಭಾಷಣ ನಿಯಂತ್ರಣ ಮಸೂದೆ'ಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಕರ್ನಾಟಕ ಸರ್ಕಾರ ಮಂಡಿಸಿದ್ದ 'ದ್ವೇಷ ಭಾಷಣ ನಿಯಂತ್ರಣ ಮಸೂದೆ'ಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕಲು ನಿರಾಕರಿಸಿ, ಸುಮಾರು 29 ಪ್ರಮುಖ ಕಾರಣಗಳನ್ನು ನೀಡಿ ಅದನ್ನು ತಡೆಹಿಡಿದಿದ್ದಾರೆ.

ಪ್ರಮುಖ ಕಾರಣಗಳು:

ಅಸ್ಪಷ್ಟ ವ್ಯಾಖ್ಯಾನ ಮತ್ತು ದುರುಪಯೋಗದ ಭೀತಿ:

ರಾಜ್ಯಪಾಲರ ಪ್ರಮುಖ ಆಕ್ಷೇಪವೆಂದರೆ ಮಸೂದೆಯಲ್ಲಿರುವ 'ದ್ವೇಷ ಭಾಷಣ'ದಖ್ ವ್ಯಾಯಾನ. "ದ್ವೇಷ ಭಾಷಣ" ಎಂದರೇನು ಎಂಬುದನ್ನು ನಿಖರವಾಗಿ ವ್ಯಾಖ್ಯಾನಿಸದ ಕಾರಣ, ಇದನ್ನು ಅಧಿಕಾರಿಗಳು ಅಥವಾ ಆಡಳಿತಾರೂಢ ಸರ್ಕಾರವು ತಮಗೆ ಬೇಕಾದಂತೆ ಬಳಸಿಕೊಳ್ಳುವ ಸಾಧ್ಯತೆಯಿದೆ. ಇದು ಧರ್ಮ, ಜಾತಿ ಅಥವಾ ವ್ಯಕ್ತಿಗಳ ಮೇಲೆ ಪೂರ್ವಾಗ್ರಹ ಪೀಡಿತ ಕ್ರಮ ಜರುಗಿಸಲು ದಾರಿಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.Shining Diva Fashion Necklace Jewellery Set for Women Latest Stylish Design Fancy Crystal (16793s)

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ:

ಸಂವಿಧಾನದ 19ನೇ ವಿಧಿಯಡಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ಮಸೂದೆ ಧಕ್ಕೆ ತರುತ್ತದೆ ಎಂಬುದು ರಾಜ್ಯಪಾಲರ ವಾದ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ಟೀಕೆಗಳು ಸಹಜ. ಆದರೆ, ಮಸೂದೆಯ ಕಠಿಣ ನಿಯಮಗಳು ಸಾಮಾನ್ಯ ಜನರ ಮತ್ತು ಬೌದ್ಧಿಕ ಚಿಂತಕರ ಧ್ವನಿಯನ್ನು ಅಡಗಿಸಬಹುದು. ಬೌದ್ಧಿಕ ಮುಕ್ತತೆಗೆ ಹೆಸರಾದ ಕರ್ನಾಟಕದಲ್ಲಿ ಇಂತಹ ಕಾನೂನು ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದನ್ನು ಓದಿ: ರಷ್ಯಾ ತೈಲಕ್ಕೆ ಪರ್ಯಾಯವಾಗಿ ವೆನೆಜುವೆಲಾ ಆಫರ್ ನೀಡಿದ ಅಮೆರಿಕ!

ಶಾಸನಾತ್ಮಕ ಪ್ರಕ್ರಿಯೆಯ ಕೊರತೆ:

ಮಸೂದೆಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸುವಾಗ ಅದರ ಬಗ್ಗೆ ಸಮಗ್ರ ಮತ್ತು ಅರ್ಥಪೂರ್ಣ ಚರ್ಚೆ ನಡೆದಿಲ್ಲ ಎಂಬುದು ಮತ್ತೊಂದು ಪ್ರಮುಖ ಕಾರಣ. ಜನಪ್ರತಿನಿಧಿಗಳ ನಡುವೆ ಸರಿಯಾದ ಚರ್ಚೆ ನಡೆಯದೆ ಇಷ್ಟು ಗಂಭೀರವಾದ ಮಸೂದೆಯನ್ನು ಅಂಗೀಕರಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.ಬಜೆಟ್ 2026: ಚೀನಾಗೆ ಶಾಕ್ ನೀಡಿದ ಭಾರತ! ಇವಿ ಬಿಡಿಭಾಗಗಳ ಉತ್ಪಾದನೆಯಲ್ಲಿ ದಕ್ಷಿಣ ಭಾರತವೇ ಇನ್ನು 'ಬಾಸ್'

ಅಸ್ತಿತ್ವದಲ್ಲಿರುವ ಕಾನೂನುಗಳು:

ಭಾರತದಲ್ಲಿ ಈಗಾಗಲೇ ದ್ವೇಷ ಭಾಷಣವನ್ನು ನಿಯಂತ್ರಿಸಲು ಭಾರತೀಯ ನ್ಯಾಯ ಸಂಹಿತೆ (ಹಳೆಯ ಐಪಿಸಿ) ಅಡಿಯಲ್ಲಿ ಹಲವಾರು ಕಠಿಣ ಕಾನೂನುಗಳಿವೆ. ಹೀಗಿರುವಾಗ ಮತ್ತೊಂದು ಹೊಸ ಮತ್ತು ಕಠಿಣ ಮಸೂದೆಯ ಅಗತ್ಯವೇನಿದೆ ಎಂಬ ಪ್ರಶ್ನೆಯನ್ನು ರಾಜ್ಯಪಾಲರು ಎತ್ತಿದ್ದಾರೆ. ಅಲ್ಲದೆ, ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಅಧಿಕಾರವು ಪೊಲೀಸ್ ವ್ಯವಸ್ಥೆಯ ದುರುಪಯೋಗಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.ಇದನ್ನು ಓದಿ: ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿರುವುದಕ್ಕೆ ನಾಚಿಕೆಯಿಂದ ತಲೆಬಾಗುತ್ತೇವೆ - ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌