ಸದ್ಯದಲ್ಲೇ ದೇಶದ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಪ್ರಯುಕ್ತ ಕೇಂದ್ರ ಸರ್ಕಾರವು ಭಾನುವಾರ(ಫೆ.01) ರಂದು ಪ್ರಸ್ತುತ ಪಡಿಸಿದ ಬಜೆಟ್ ಬಹುಮುಖ್ಯವೆನಿಸಿದೆ. ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಬಜೆಟ್ ಪ್ರಮುಖವೆನಿಸಿದೆ.
2026-27ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ರಾಜ್ಯಗಳಿಗೆ ಬಂಪರ್ ಘೋಷಣೆಗಳಾಗಿದೆ. ನಾಲ್ಕು ಪ್ರಮುಖ ರಾಜ್ಯಗಳಿಗೆ ಅರ್ಥ್ ಕಾರಿಡಾರ್ ಘೋಷಣೆ ಮಾಡಿದ್ದು, ಕೇರಳ, ಒಡಿಶಾ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಬಹುಕೊಡುಗೆ ಸಿಕ್ಕಂತಾಗಿದೆ. ಇನ್ನುಳಿದಂತೆ, ಪ್ರವಾಸೋದ್ಯಮ, ಕೃಷಿ, ತೆರಿಗೆ ಪಾಲು, ಕೈಗಾರಿಕೆ, ಆರೋಗ್ಯ ಕ್ಷೇತ್ರ, ಮೂಲಕಸೌಕರ್ಯಗಳ ಅಭಿವೃದ್ದಿ ಸೇರಿದಂತೆ ಮುಂಗಡಪತ್ರದಲ್ಲಿ ರಾಜ್ಯಗಳಿಗೆ ಒತ್ತು ಕೊಡಲಾಗಿದೆ. Sankranthi: Collection of Drama Paperback
ಮುಂದಿನ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯಲಿರುವ ಈ ರಾಜ್ಯಗಳ ಚುನಾವಣೆಗೆ ವಿಶೇಷ ದೃಷ್ಟಿ ಹಾಯಿಸಿರುವ ಕೇಂದ್ರ ಸರ್ಕಾರದ ನಡೆಯು ಸುದ್ದಿಯಲ್ಲಿದೆ. ಈ ಕುರಿತು ರಾಜಕೀಯ ವಿಶ್ಲೇಷಣೆಗಳು, ಮಾಹಿತಿ ಸಂಚಾರಕ್ಕೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನ ಕೊಡುಗೆಯೇನು - ರಾಜಕೀಯ ನಾಯಕರು ಏನಂದರು!?