ಆರೋಗ್ಯವೇ ಭಾಗ್ಯವಾಗಿದೆ. ಇದಕ್ಕೆ ನಮ್ಮ ದೇಹ ಮಾತ್ರವಲ್ಲ, ಸುತ್ತಮುತ್ತಲಿನ ಪ್ರದೇಶ, ವಾತಾವರಣ ಹಾಗೂ ನೈಸರ್ಗಿಕ ಸಮತೋಲನ ಮುಖ್ಯವಾಗಿರುತ್ತದೆ. ಆದರೆ, ಇತ್ತೀಚಿನ ಕಾಲಮಾನದಲ್ಲಿ ಹವಾಮಾನ ವೈಪರೀತ್ಯ ವಿಪರೀತಿಯೆಂಬಂತಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಬೆಳಗ್ಗೆ ಚುಮು ಚುಮು ಚಳಿಯ ನಂತರ ಸೂರ್ಯನ ಪ್ರಖರ ಬಿಸಿಲು ಆನಂತರ ಮೋಡ ಕವಿದ ವಾತಾವರಣ ಹೀಗೆ ದಿವಸದಲ್ಲಿ ಏಕಕಾಲಕ್ಕೆ ಮೂರು ಋತುಗಳನ್ನು ಕಾಣುವಂತಾಗಿದೆ. Lankeshara 2 Naatakagalu Paperback – 1 January 2017
ನಗರದಲ್ಲಿನ ಹವಾಮಾನದಲ್ಲಿ ಕಾಣುತ್ತಿರುವ ಮಹತ್ವದ ಬದಲಾವಣೆಯನ್ನು ಮನಗಂಡು ಭಾರತೀಯ ಹವಾಮಾನ ಇಲಾಖೆಯು (IMD) ನಗರೀಕರಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದೆಂದು ಹೇಳಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಬೆಳಗಿನ ವಾತಾವರಣದ ನಂತರ ದಿಢೀರ್ ಮೋಡ ಕವಿದ ವಾತಾವರಣ, ಉಷ್ಣಾಂಶದಲ್ಲಿ ಏರಿಳಿತ, ಮಳೆ ಸಂಭವದಂತಹ ವ್ಯತ್ಯಾಸಗಳಿಂದ ಶೀತ, ಕೆಮ್ಮಿನಂತಹ ಆರೋಗ್ಯ ಸಂಬಂಧಿ ಪ್ರಭಾವ ಬೀರಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಜೆಟ್ ಪರಿಣಾಮ - ಹೇಗಿದೆ ಹೂಡಿಕೆ ಮತ್ತು ಚಿನ್ನಾಭರಣಗಳ ಮಾರುಕಟ್ಟೆ ಸ್ಥಿತಿಗತಿ!?