ಪ್ರಸ್ತುತ ವಿದ್ಯಮಾನದಲ್ಲಿ ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಮತ್ತೊಂದು ವಲಯವಾದ `ಕ್ರಿಯೆಟಿವ್ ಟೆಕ್ನಾಲಜಿʼಯು ಮನ್ನಣೆ ಪಡೆದುಕೊಳ್ಳುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ 2026-27 ನೇ ಸಾಲಿನಲ್ಲಿ ಪ್ರಪೋಸ್ಡ್ “ಆರೆಂಜ್ ಎಕಾನಮಿ - ಭಾರತದ ಆನಿಮೇಷನ್, ಗೇಮಿಂಗ್ ಮತ್ತು ಕಾಮಿಕ್ಸ್ (AVCG)” ವಲಯಕ್ಕೆ ಬೆಂಬಲ ಸೂಚಿಸಿದೆ.
2030ರ ವೇಳೆಗೆ, 2 ಮಿಲಿಯನ್ ವೃತ್ತಿಪರರ ಅಗತ್ಯವಿದ್ದ ಬೆಳೆಯುತ್ತಿರುವ ಉದ್ಯಮ ಕ್ಷೇತ್ರವೆಂದು ಇದನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ದೇಶಾದ್ಯಂತ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಷನ್ ಪ್ರಯೋಗಾಲಯಗಳನ್ನು ಸ್ಥಾಪಿಸುವಲ್ಲಿ ಪ್ರಸ್ತಾಪಿಸಿದೆ.
2025-26 ರ ಆರ್ಥಿಕ ಸಮೀಕ್ಷೆಯಲ್ಲಿ ಇದನ್ನು ಮನಗಂಡಿದ್ದು, ಆರೆಂಜ್ ಎಕಾನಮಿ ಎಂದರೆ, ಸೃಜನಶೀಲ ಆರ್ಥಿಕತೆ ಎಂದು ಹೇಳಲಾಗಿದೆ. ಕಲೆ, ಸಂಸ್ಕೃತಿ, ವಿನ್ಯಾಸ, ತಂತ್ರಜ್ಞಾನ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಆರ್ಥಿಕ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಒಳಗೊಂಡಿದೆ. Krishna Tales Children's Story Book Set, Educational Activity Books for Kids Above 3 Years, Krishna and the Butter Pot with Krishna and Sudama Stories, 2-Book Combo Pack Perfect Paperback
ಈ ನಿಟ್ಟಿನಲ್ಲಿ, ಜಾಗತಿಕ ವೇದಿಕೆಯೆಂಬಂತೆ, ಕಂಟೆಂಟ್ ಕ್ರಿಯೆಟರ್ಸ್ ಪ್ಯಾಕೇಜ್, AVCG ನ್ಯಾಷನಲ್ ಮಿಷನ್, ಗೇಮಿಂಗ್ ಹಾಗೂ ಗ್ರಾಫಿಕ್ ಡಿಸೈನಿಂಗ್‌ಗೆ ಬಲತುಂಬಿ ಉದ್ಯೋಗ ಹಾಗೂ ಶಿಕ್ಷಣಾಧಾರಿತ ಕೌಶಲ್ಯವನ್ನು ತರಬೇತುಗೊಳಿಸಿ ಯುವಜನತೆಯ ಪ್ರಗತಿ ಹಾಗೂ ವಿಶ್ವ ಭಾರತ ಸೃಜನತೆಗೆ ಸುಗಮ ಪ್ರೋತ್ಸಾಹ ಹಾದಿಯಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಬಂಪರ್ ಗಿಫ್ಟ್!?