2026 27 ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಬೆಳವಣಿಗೆ ಕೇಂದ್ರಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ `ವಿಕಸಿತ ಭಾರತ’ದ ಕನಸಿಗೆ ಹಾಗೂ ಭಾರತದ ಭವ್ಯ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿಯವರು ತಿಳಿಸಿದ್ದಾರೆ.
ಕೈಗಾರಿಕಾ ಹಾಗೂ ದೇಶಿಯ ಉತ್ಪಾದನೆಯ ಅಡಿಪಾಯಕ್ಕೆ ಭದ್ರತೆ, ಗ್ರಾಮಗಳ ಬೆಳವಣಿಗೆಗೆ ಉತ್ತೇಜನ ಹಾಗೂ ಮಹಾತ್ಮ ಗಾಂಧಿ ಗ್ರಾಮಸ್ವರಾಜ್‌ನಂತಹ ಹೊಸ ಚೈತನ್ಯಗಳಿಗೆ ಭರವಸೆ ನೀಡಲಿದೆ. ಇದು ಜನಕೇಂದ್ರಿತ ಯೋಜನೆಗಳು, ಉದ್ಯಮಿಗಳು ಸೇರಿದಂತೆ ಅಂಗವಿಕಲರಿಗೆ ಹೆಚ್ಚು ಅವಕಾಶಗಳನ್ನು ನೀಡಲಿದೆ. ಇದುವೆ ಆತ್ಮನಿರ್ಭರ ಸಂಕಲ್ಪದೊಂದಿಗೆ ಕೂಡಿರುವ ಬಜೆಟ್ ಎಂದು ತಿಳಿಸಿದ್ದಾರೆ.
ಕರ್ನಾಟಕದ ತೆರಿಗೆ ಪಾಲಿನ ಕುರಿತು -
ಕರ್ನಾಟಕದ ತೆರಿಗೆ ಪಾಲಿನ ವಿಷಯವಾಗಿ ಕೇಂದ್ರ ಸರ್ಕಾರವು, ತೆರಿಗೆ ಪಾಲನ್ನು ಹೆಚ್ಚಳ ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ. ಕರ್ನಾಟಕದ ಶೇ.3.64ರಷ್ಟಿದ್ದ ತೆರಿಗೆ ಪಾಲನ್ನು ಶೇ.4.13ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಹೆಚ್ಚು ತೆರಿಗೆ ಪಾಲು ದೊರಕಲಿದೆ ಎಂದಿದ್ದಾರೆ ಎಂದು ವರದಿಯಾಗಿದೆ. Why the Constitution Matters: Selected Speeches Hardcover – 22 September 2025
ಕ್ಲೀನ್ ಎನರ್ಜಿಗೆ ಎಷ್ಟು ಅನುದಾನ? -
ಕೇಂದ್ರ ಬಜೆಟ್ 2026-27ನಲ್ಲಿ ಹೆಚ್ಚುವರಿ ಹಣಕಾಸಿನ ನೆರವಿನ ಮೂಲಕ ಸೌರಶಕ್ತಿ ಹಾಗೂ ಶುದ್ದ ಇಂಧನ ಮತ್ತು ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಲಾಗಿದೆ. ಪಿಎಂ ಸೂರ್ಯಘರ್ ಯೋಜನೆಯ ಹಂಚಿಕೆಯನ್ನು ಕಳೆದ ವರ್ಷದ ₹20,000 ಕೋಟಿಯಿಂದ 2026ರಲ್ಲಿ ₹22,000 ಕೋಟಿಗೆ ಹೆಚ್ಚಿಸಲಾಗಿದೆ. ಹಾಗೆಯೇ, 2025ರಲ್ಲಿ ₹2,600 ಕೋಟಿ ಪಡೆದಿದ್ದ ಪಿಎಂ ಕುಸುಮ್ ಯೋಜನೆಗೆ ಈ ಬಾರಿ ₹5,000 ಕೋಟಿ ಹಂಚಿಕೆಯೊಂದಿಗೆ ನಿರಂತರ ಬೆಂಬಲ ಪಡೆಯುತ್ತಿದೆ ಎಂದು ತಿಳಿಸಿ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಜೆಟ್ 2026 - ʻಆರೆಂಜ್ ಎಕಾನಮಿʼಗೆ ಒತ್ತು - ಹಾಗೆಂದರೇನು ಗೊತ್ತಾ!?