Skip to main content
ವಿಡಿಯೋ
politics

ಲೋಕಸಭೆ ಬಜೆಟ್‌ ಅಧಿವೇಶನದಿಂದ ಅಮಾನತುಗೊಂಡ 8 ವಿಪಕ್ಷ ಸಂಸದರು!

By Shravanthi R
ಲೋಕಸಭೆ ಬಜೆಟ್‌ ಅಧಿವೇಶನದಿಂದ ಅಮಾನತುಗೊಂಡ 8 ವಿಪಕ್ಷ ಸಂಸದರು!

ಲೋಕಸಭೆಯಲ್ಲಿ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ತೋರಿದ ಪರಿಣಾಮ ಎಂಟು ವಿಪಕ್ಷ ಸಂಸದರನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ. ಇಂದು ಲೋಕಸಭೆಯಲ್ಲಿ ಸ್ಪೀಕರ್‌ ಪೀಠದ ಮೇಲೆ ಕಾಗದ ಹರಿದು ಎಸೆದ ಸಂಸದರನ್ನು ಇಡೀ ಬಜೆಟ್‌ ಅಧಿವೇಶನದಿಂದೇ ಅಮಾನತುಗೊಳಿಸಲಾಗಿದೆ.

ಘಟನೆಯ ವಿವರ - 

ಇಂದು ಮಧ್ಯಾಹ್ನ 3 ಗಂಟೆಗೆ ಕಲಾಪ ಪುನರಾರಂಭಗೊಂಡಾಗ ಸಭಾಪತಿಗಳ ಪೀಠದ ಮೇಲೆ ಕಾಗದ ಎಸೆದು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಆರೋಪಿಸಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಪ್ರಕಟವಾಗದ ಆತ್ಮಚರಿತ್ರೆಯ (Memoir) ಆಯ್ದ ಭಾಗಗಳನ್ನು ಉಲ್ಲೇಖಿಸಿ ಲೇಖನವೊಂದನ್ನು ಓದಲು ಅವರಿಗೆ ಸ್ಪೀಕರ್ ಅನುಮತಿ ನೀಡಲಿಲ್ಲ. ಇದರಿಂದ ಕುಪಿತಗೊಂಡ ಸಂಸದರು ಪ್ರತಿಭಟನೆಗಿಳಿದರು ಎನ್ನಲಾಗಿದೆ. 

ಸಭಾಧ್ಯಕ್ಷರ ಪೀಠದಲ್ಲಿದ್ದ ದಿಲೀಪ್‌ ಸೈಕಿಯಾ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದರು. ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಿರಣ್ ಕುಮಾರ್ ರೆಡ್ಡಿ, ಹಿಬಿ ಈಡನ್, ಡೀನ್ ಕುರಿಯಾಕೋಸ್ ಮತ್ತು ಪ್ರಶಾಂತ್ ಪಡೋಲೆ ಕಾಂಗ್ರೆಸ್‌ ಸಂಸದರು ಹಾಗೂ ಎಸ್ ವೆಂಕಟೇಶನ್ ಸಿಪಿಎಂ ಸಂಸದರನ್ನು ಏಪ್ರಿಲ್‌ 2ರವರೆಗಿನ ಬಜೆಟ್‌ ಅಧಿವೇಶನದಿಂದ ಅಮಾನತುಗೊಳಿಸಿರುವುದಾಗಿ ತಿಳಿಸಲಾಗಿದೆ. 

ಈ ಬೆಳವಣಿಗೆ ಹಿನ್ನಲೆಯಲ್ಲಿ, ಲೋಕಸಭೆಯಲ್ಲಿ ಗದ್ದಲ ಹೆಚ್ಚಾಗಿದ್ದು, ದಿನಮಟ್ಟಿಗೆ ಕಲಾಪವನ್ನು ಮುಂದೂಡಲಾಗಿದೆ ಎಂದ ವರದಿಯಾಗಿದೆ. ಇದನ್ನೂ ಓದಿ: ವಿಧಾನಪರಿಷತ್‌ನಲ್ಲಿ ವಾಕ್ಸಮರ: ಸಿ.ಟಿ. ರವಿ 'ಪಾಕಿಸ್ತಾನದ ನಾಲಿಗೆ' ಹೇಳಿಕೆಗೆ ಸದನ ಕೆಂಡಾಮಂಡಲ..!