Skip to main content
ವಿಡಿಯೋ
politics

ಕರ್ನಾಟಕ ಸ್ಥಳೀಯ ಚುನಾವಣೆ 2026 - ಬಳ್ಳಾರಿ ಜಿಲ್ಲೆಯ ಚುನಾವಣಾ ಮಾಹಿತಿ

By Shravanthi R
ಕರ್ನಾಟಕ ಸ್ಥಳೀಯ ಚುನಾವಣೆ 2026 - ಬಳ್ಳಾರಿ ಜಿಲ್ಲೆಯ ಚುನಾವಣಾ ಮಾಹಿತಿ

ಆಂಧ್ರಪ್ರದೇಶದ ಗಡಿಭಾಗ ಹಂಚಿಕೊಂಡಿರುವ ಈ ಜಿಲ್ಲೆಯು, 2021 ರಲ್ಲಿ ವಿಜಯನಗರ ಜಿಲ್ಲೆಯಿಂದ ಪ್ರತ್ಯೇಕಗೊಳ್ಳುವ ಮೂಲಕ ಹೊಸಪೇಟೆ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳು ವಿಜಯನಗರ ಜಿಲ್ಲೆಗೆ ಸೇರಿವೆ. ಇದು ಲೋಕಸಭಾ ಎಸ್‌ಸಿಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಇದರ ವಿಧಾನಸಭಾ ಕ್ಷೇತ್ರಗಳೆಂದರೆ - ಬಳ್ಳಾರಿ, ಕುರುಗೋಡು, ಸಿರುಗುಪ್ಪ ಮತ್ತು ಸಂಡೂರು.

ಕರ್ನಾಟಕದ ಪೂರ್ವಭಾಗದಲ್ಲಿರುವ ಬಳ್ಳಾರಿ ಜಿಲ್ಲೆಯು, ತನ್ನ ಐತಿಹಾಸಿಕತೆ ಹಾಗೂ ಕೈಗಾರಿಕೆ, ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ವಿಶ್ವವಿಖ್ಯಾತ ಹಂಪಿ ಸೇರಿದಂತೆ ಸಾಂಸ್ಕೃತಿಕ ಪಾರಂಪರಿಕ ತಾಣಗಳ ನೆಲೆಯಾಗಿದೆ. 

ಆಂಧ್ರಪ್ರದೇಶದ ಗಡಿಭಾಗ ಹಂಚಿಕೊಂಡಿರುವ ಈ ಜಿಲ್ಲೆಯು, 2021 ರಲ್ಲಿ ವಿಜಯನಗರ ಜಿಲ್ಲೆಯಿಂದ ಪ್ರತ್ಯೇಕಗೊಳ್ಳುವ ಮೂಲಕ ಹೊಸಪೇಟೆ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳು ವಿಜಯನಗರ ಜಿಲ್ಲೆಗೆ ಸೇರಿವೆ. ಇದು ಲೋಕಸಭಾ ಎಸ್‌ಸಿಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಇದರ ವಿಧಾನಸಭಾ ಕ್ಷೇತ್ರಗಳೆಂದರೆ - ಬಳ್ಳಾರಿ, ಕುರುಗೋಡು, ಸಿರುಗುಪ್ಪ ಮತ್ತು ಸಂಡೂರು.  

ಪ್ರಸ್ತುತ ಈ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆ 14,00,970 ಎಂದು ಮಾಹಿತಿಯಿದೆ. 100 ಗ್ರಾಮ ಪಂಚಾಯಿತಿಗಳು; 627 ಕಂದಾಯ ಗ್ರಾಮಗಳಿದ್ದು, ಮುಂಬರಲಿರುವ ಸ್ಥಳೀಯ ಮಟ್ಟದ ಚುನಾವಣೆಗಳು ಪ್ರಮುಖವಾಗಲಿದೆ. 

ಪ್ರಸಕ್ತ ರಾಜಕೀಯ ವಿದ್ಯಮಾನಗಳು - 

ಜಾತಿ ಸಮೀಕರಣ - ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ(ನಾಯಕ) ಮತಗಳು ನಿರ್ಣಾಯಕವಾಗಲಿದೆ. 

ರಾಜಕೀಯ ಸಂಘರ್ಷ - ಪ್ರಸ್ತುತ ಬಳ್ಳಾರಿ ನಗರ - ನಾರಾ ಭರತ್ ರೆಡ್ಡಿ (ಕಾಂಗ್ರೆಸ್) ಬಳ್ಳಾರಿ ಗ್ರಾಮೀಣ - ಬಿ. ನಾಗೇಂದ್ರ (ಕಾಂಗ್ರೆಸ್) ಹಾಗೂ ಸಂಡೂರು (ST): ಇ. ತುಕಾರಾಂ (ಕಾಂಗ್ರೆಸ್) ಶಾಸಕರಾಗಿದ್ದಾರೆ. ಇತ್ತೀಚೆಗೆ ನಡೆದ ರಾಜಕೀಯ ಘರ್ಷಣೆಗಳು ಸ್ಥಳೀಯ ಚುನಾವಣೆಗಳಿಗೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. Incomplete Justice? The Supreme Court at 75 Hardcover – 18 August 2025

ಚುನಾವಣೆ 2026 - ಫೆಬ್ರವರಿ 14 ರಂದು ಮತದಾರರ ಅಂತಿಮ ಪಟ್ಟಿ ಬಿಡುಗಡೆ ನಿರೀಕ್ಷೆಯಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಈ ವರ್ಷದ ಮೊದಲಾರ್ಧದಲ್ಲಿ ಸ್ಥಳೀಯ (ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್‌) ಚುನಾವಣೆಗಳು ನಡೆಯಲಿವೆ. ಈ ಮಧ್ಯೆ ಪಾಲಿಕೆ ವಾರ್ಡ್‌ವಾರು ಮರುಹಂಚಿಕೆ, ಮೀಸಲಾತಿ ಪ್ರಕ್ರಿಯೆಗಳು ಸುದ್ದಿಯಲ್ಲಿದೆ. ಇದನ್ನೂ ಓದಿ: ಲೋಕಸಭೆ ಬಜೆಟ್‌ ಅಧಿವೇಶನದಿಂದ ಅಮಾನತುಗೊಂಡ 8 ವಿಪಕ್ಷ ಸಂಸದರು!

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.