ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡೂ ಪಕ್ಷಗಳ ನಾಯಕರು ಕ್ಷೇತ್ರ ಹಂಚಿಕೆಗಾಗಿ ಈಗಿನಿಂದಲೇ ಪಟ್ಟು ಹಿಡಿದಿರುವುದು ಮೈತ್ರಿಯಲ್ಲಿ ಬಿರುಕು ಮೂಡಿಸುವ ಮುನ್ಸೂಚನೆ ನೀಡಿದೆ.
ಕ್ಷೇತ್ರ ಹಂಚಿಕೆ ಮತ್ತು ಬಿಗಿಪಟ್ಟು:
ಬಿಜೆಪಿ ನಾಯಕರು ಮಂಡ್ಯದ ಕೆಲವು ಪ್ರಮುಖ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ವಿಶೇಷವಾಗಿ ಕೆ.ಆರ್. ಪೇಟೆ ಸೇರಿದಂತೆ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳು ತಮಗೆ ಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಶೇಕಡಾ 50ರಷ್ಟು ಸ್ಥಾನಗಳನ್ನು ಬಿಜೆಪಿಗೆ ನೀಡಬೇಕೆಂಬ ಬೇಡಿಕೆ ಮಂಡಿಸಲಾಗಿದೆ.YouBella Jewellery Sets for Women Crystal Studded Necklace Jewellery set Bracelet with Earrings For Girls/Women
ನಿಖಿಲ್ ಕುಮಾರಸ್ವಾಮಿ ಹೇಳಿಕೆ ಮತ್ತು ವಿವಾದ:
ವಿವಾದಕ್ಕೆ ತುಪ್ಪ ಸುರಿದಂತೆ, ಇತ್ತೀಚೆಗೆ ಕೆ.ಆರ್. ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 2028ರ ಚುನಾವಣೆಯಲ್ಲಿ ಎಚ್.ಟಿ. ಮಂಜು ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದರು.
ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರ ನಿಖಿಲ್ ಅವರಿಗೆ ಇಲ್ಲ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.ಇದನ್ನು ಓದಿ: ಪುದುಚೇರಿ ಚುನಾವಣೆ 2026: ಪ್ರಣಾಳಿಕೆ ಸಿದ್ಧತೆಗೆ ಜನರ ಬಳಿ ಹೋದ ಬಿಜೆಪಿ; 15 ದಿನಗಳ ವಿಶೇಷ ಅಭಿಯಾನಕ್ಕೆ ಚಾಲನೆ!
ನಾಯಕರ ನಡುವಿನ ವಾಗ್ಯುದ್ಧ:
ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡರು, ಸತತ ಸೋಲು ಅನುಭವಿಸಿರುವ ನಿಖಿಲ್ ಅವರು ಮೊದಲು ತಮ್ಮ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಇಂತಹ ಏಕಪಕ್ಷೀಯ ಹೇಳಿಕೆಗಳು ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತವೆ ಎಂಬ ಆತಂಕ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಅಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಮುಂದಾಗಿದೆ. ನಾಯಕರ ನಡುವಿನ ಈ ಹಗ್ಗಜಗ್ಗಾಟವು ಹೈಕಮಾಂಡ್ ಮಟ್ಟದಲ್ಲಿ ಹೇಗೆ ಬಗೆಹರಿಯುತ್ತದೆ ಎಂಬುದರ ಮೇಲೆ ಮೈತ್ರಿಯ ಭವಿಷ್ಯ ನಿರ್ಧಾರವಾಗಲಿದೆ.ಇದನ್ನು ಓದಿ: ಬಂಗಾಳ ಸಮರ 2026: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಈ ಬಾರಿ ಕಂಟಕವಾಗಲಿವೆಯೇ ಈ ಅಂಶಗಳು?