Skip to main content
ವಿಡಿಯೋ
1/2
metro

ಮೆಟ್ರೋ ಪ್ರಯಾಣಿಕರಿಗೆ ಶಾಕ್: ಫೆಬ್ರವರಿ 9ರಿಂದ ನಮ್ಮ ಮೆಟ್ರೋ ದರ ಶೇ. 5ರಷ್ಟು ಏರಿಕೆ..!

By Sushmitha R
ಮೆಟ್ರೋ ಪ್ರಯಾಣಿಕರಿಗೆ ಶಾಕ್: ಫೆಬ್ರವರಿ 9ರಿಂದ ನಮ್ಮ ಮೆಟ್ರೋ ದರ ಶೇ. 5ರಷ್ಟು ಏರಿಕೆ..!

ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬಿಸಿ ಮುಟ್ಟಿಸಿದೆ.

ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬಿಸಿ ಮುಟ್ಟಿಸಿದೆ.

ನಿತ್ಯದ ಪ್ರಯಾಣಕ್ಕೆ ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಜನರಿಗೆ ಇದು ಆಘಾತಕಾರಿ ಸುದ್ದಿಯಾಗಿದ್ದು, ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಶೇ. 5 ರಷ್ಟು ದರ ಏರಿಕೆಯ ಅಧಿಕೃತ ಆದೇಶ ಹೊರಬಿದ್ದಿದೆ.YouBella Jewellery Sets for Women Crystal Studded Necklace Jewellery set Bracelet with Earrings For Girls/Women

ನಮ್ಮ ಮೆಟ್ರೋದ ಈ ಪರಿಷ್ಕೃತ ದರಗಳು ಇದೇ ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿವೆ. ಈ ಏರಿಕೆಯು ಕೇವಲ ಸಾಮಾನ್ಯ ಟಿಕೆಟ್‌ಗಳಿಗೆ ಮಾತ್ರವಲ್ಲದೆ, ಪ್ರವಾಸಿ ಕಾರ್ಡ್‌ಗಳು ಮತ್ತು ಗುಂಪು ಟಿಕೆಟ್‌ಗಳಿಗೂ ಅನ್ವಯವಾಗಲಿದೆ.

ಕಳೆದ ವರ್ಷವಷ್ಟೇ (2025) ಬಿಎಂಆರ್‌ಸಿಎಲ್ ದರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು, ಆದರೆ ಈ ವರ್ಷದ ಸತತ ಏರಿಕೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ.ಇದನ್ನು ಓದಿ: ಮಂಡ್ಯದಲ್ಲಿ ಮೈತ್ರಿ ಸಂಘರ್ಷ: ಚುನಾವಣೆಗೂ ಮುನ್ನವೇ ಬಿಜೆಪಿ-ಜೆಡಿಎಸ್ ನಡುವೆ ಟಿಕೆಟ್ ಫೈಟ್..!

ಏರಿಕೆ ಯಾಕೆ?

ನಿರ್ವಹಣಾ ವೆಚ್ಚ, ವಿದ್ಯುತ್ ದರ ಏರಿಕೆ ಮತ್ತು ಮೆಟ್ರೋದ ವಿಸ್ತರಿತ ಮಾರ್ಗಗಳ ನಿರ್ವಹಣೆಯನ್ನು ಸರಿದೂಗಿಸಲು ಈ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಆದರೂ, ಸಾರಿಗೆ ಸೌಲಭ್ಯ ದುಬಾರಿಯಾಗುತ್ತಿರುವುದು ಸಾಮಾನ್ಯ ಜನರಲ್ಲಿ ಅಸಮಾಧಾನ ಮೂಡಿಸಿದೆ.ಇದನ್ನು ಓದಿ: ಕೇರಳ ಚುನಾವಣೆ 2026: ಪೂಂಜಾರ್‌ನಲ್ಲಿ ಪಿ.ಸಿ. ಜಾರ್ಜ್, ಪಾಲಾದಲ್ಲಿ ಶಾನ್: ಬಿಜೆಪಿಯಿಂದ ತಂದೆ-ಮಗ ಕಣಕ್ಕೆ?